ಅಂದು ತಂದೆಗೆ ಶ್ರಮಿಕ ರತ್ನ ಪ್ರಶಸ್ತಿ, ಇಂದು ಪುತ್ರ ಪತ್ರಕರ್ತ ಡಿ.ವಿ.ಕಮ್ಮಾರಗೂ ಕೂಡಾ ಅದೇ ಶ್ರಮಿಕ ರತ್ನ ಪ್ರಶಸ್ತಿ ಸಿಗುವ ಮೂಲಕ ತಂದೆ-ಮಕ್ಕಳು ಅಪರೂಪದ ಸಾಧನೆಗೆ ಸಾಕ್ಷಿಯಾಗಿದ್ದಾರೆ.
ಹೌದು ಖಾನಾಪೂರ ತಾಲೂಕಿನ ಅವರೋಳ್ಳಿ ಗ್ರಾಮದ ವೀರಭದ್ರ ಕಮ್ಮಾರ ಅವರಿಗೆ ಎರಡು ವರ್ಷಗಳ ಹಿಂದೆಯಷ್ಟೇ ಮುಷ್ಠಿ ಬೀಗದ ಆವಿಷ್ಕಾರಕ್ಕಾಗಿ ಅಕ್ಷರ ತಾಯಿ ಲೂಯಿ ಸಾಲ್ಡಾನ್ ಸೇವಾ ಸಂಸ್ಥೆ ಕೊಡಮಾಡುವ ಶ್ರಮಿಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿತ್ತು. ಈಗ ಈ ವರ್ಷದ ಪ್ರಶಸ್ತಿಗೆ ಅವರ ಪುತ್ರ, ಪತ್ರಕರ್ತ ಡಿ.ವಿಕಮ್ಮಾರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅಕ್ಟೋಬರ್ 30ರಂದು ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಒಂದೇ ಪ್ರಶಸ್ತಿ ತಂದೆ-ಮಗ ಇಬ್ಬರನ್ನೂ ಹುಡುಕಿಕೊಂಡು ಬಂದಿದ್ದು, ಇದು ಖಾನಾಪೂರ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕ ವಿದ್ಯಾವರ್ಧಕ ಸಂಘ, ಪಾಟೀಲ್ ಪುಟ್ಟಪ್ಪ ಸಭಾ ಭವನ ಧಾರವಾಡದಲ್ಲಿ ಈ ರಾಜ್ಯ ಮಟ್ಟದ ಪ್ರಶಸ್ತಿ ಸಮಾರಂಭ ನಡೆಯಲಿದೆ.