ಗೋಕಾಕ: ಪಶ್ಚಿಮಘಟ್ಟ, ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆ ಕರದಂಟು ನಾಡಿನ ಪ್ರಸಿದ್ದ ಗೋಕಾಕ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಭಾರತ ನಯಾನಗರ ಜಲಪಾತ ಎಂದೇ ಖ್ಯಾತಿ ಪಡೆದಿರುವ ಗೋಕಾಕ ಫಾಲ್ಸ್, ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 40 ಸಾವಿರ ಸಾವಿರ ಕ್ಯೂಸೆಕ್ಸ್ ನೀರು ಹರಿ ಬಿಡಲಾಗಿದೆ. ಹೀಗಾಗಿ ಫಾಲ್ಸ್ ನೀರಿನ ಮಟ್ಟ ಹೆಚ್ಚಿದ್ದು, ಬಂಡೆಗಳ ಮೇಲಿಂದ ನೀರು ಧುಮುಕುವ ಮನೋಹರ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿಯೂ ಫಾಲ್ಸ್ ಗೆ ಭೇಟಿ ನೀಡುವವರ ಸಂಖ್ಯೆಯೂ ವಿರಳವಾಗಿದೆ.
ಇನ್ನು ಲೋಳಸೂರು ಬ್ರಿಡ್ಜ್ ಮುಳಗಡೆಯಾಗಿದ್ದು, ಗೋಕಾಕ ಜನತೆಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
https://www.facebook.com/105350550949710/videos/759816248114521/?sfnsn=wiwspmo&extid=6Ge0gV3ZGoVyu0xP&d=n&vh=e