Breaking News

ಶಿಕ್ಷಕರಿಗೆ ದೀಪಾವಳಿ ಗಿಫ್ಟ್: ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ -ಟ್ರಾನ್ಸ್ಫರ್ ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಿಹಿ ಸುದ್ದಿ

Spread the love

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಲಾಗಿದೆ. ನಾಳೆಯಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ.

2022ರ ಫೆಬ್ರವರಿ 26 ರವರೆಗೂ ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಅರ್ಜಿ ಸಲ್ಲಿಸಿದ 72,000 ಶಿಕ್ಷಕರಿಗೆ ವರ್ಗಾವಣೆ ಭಾಗ್ಯ ಸಿಗಲಿದೆ. ವರ್ಗಾವಣೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಕಡ್ಡಾಯ ವರ್ಗಾವಣೆ ಆಗಿದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಮೊದಲ ಹಂತದ ಕೌನ್ಸೆಲಿಂಗ್ ನವೆಂಬರ್ 2 ರಂದು ನಡೆಯಲಿದೆ. ಎರಡನೇ ಹಂತದ ಕೌನ್ಸೆಲಿಂಗ್ 2021ರ ಜನವರಿ 18 ರಂದು ನಡೆಯಲಿದೆ.

ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಒಂದನೇ ಹಂತದ ಕೌನ್ಸೆಲಿಂಗ್ ನವೆಂಬರ್ 24 ರಿಂದ ಡಿಸೆಂಬರ್ 2 ರ ವರೆಗೆ ನಡೆಯಲಿದೆ. ಎರಡನೇ ಹಂತದ ಕೌನ್ಸೆಲಿಂಗ್ ಜನವರಿ 19 ರಿಂದ 27ರ ವರೆಗೆ ನಡೆಯಲಿದೆ.

ಜಿಲ್ಲೆಯೊಳಗಿನ ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್ ಮೊದಲ ಹಂತದಲ್ಲಿ ನವೆಂಬರ್ 19 ರಿಂದ ಹಾಗೂ ಎರಡನೇ ಹಂತದ ಕೌನ್ಸೆಲಿಂಗ್ ಜನವರಿ 19 ರಿಂದ ಆರಂಭವಾಗಲಿದೆ.

ಘಟಕದ ಹೊರಗೆ ಮತ್ತು ವಲಯದೊಳಗಿನ ಕೋರಿಕೆ ವರ್ಗಾವಣೆಗೆ ನವೆಂಬರ್ 16 ರಿಂದ ಮೊದಲ ಹಂತದ ಕೌನ್ಸೆಲಿಂಗ್ ನಡೆಯಲಿದ್ದು, ಫೆಬ್ರವರಿ 1 ರಿಂದ ಎರಡನೇ ಹಂತದ ಕೌನ್ಸೆಲಿಂಗ್ ನಡೆಯಲಿದೆ ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಬಡಾವಣೆಗಳನ್ನು ರೂಪಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆ

Spread the loveಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಹೊರತುಪಡಿಸಿದ ಪ್ರದೇಶಗಳಲ್ಲಿನ ಭೂಪರಿವರ್ತಿತ ಜಮೀನುಗಳಲ್ಲಿ ಬಡಾವಣೆಗಳ ವಿನ್ಯಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ