ಬೀದರ್: ಮಟ್ಕಾ ದಂಧೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸ್ ಪೇದೆಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಬೀದರ್ ಜಿಲ್ಲೆಯ ಔರಾದ್ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೆಬಲ್ ಸಂಗಮೇಶ್ ನಿಟ್ಟೂರೆ ಮೇಲೆ ಹಲ್ಲೆ ನಡೆದಿದೆ.
ಔರಾದ್ ತಾಲೂಕಿನ ಹಲವೆಡೆ ಮಟಕಾ ದಂಧೆ ನಡೆಯುತ್ತಿದ್ದು, ಈ ಅಕ್ರಮದ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಗಮೇಶ್ರನ್ನು ಶಿವಶಂಕರ್ ಮಳಗೆಮನೆ ಎಂಬಾತ ಕರೆಸಿಕೊಂಡು, ಇತರ ನಾಲ್ವರೊಂದಿಗೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಟಕಾ ಬುಕ್ಕಿಗಳಾದ ಶಿವಶಂಕರನನ್ನು ದಸ್ತಗಿರಿ ಮಾಡಲಾಗಿದೆ. ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಜರಂಗ ಮತ್ತು ಇತರ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ನಡೆದಿದೆ ಎಂದು ಬೀದರ್ ಎಸ್ಪಿ ಡಿ.ಎಲ್.ನಾಗೇಶ್ ತಿಳಿಸಿದ್ದಾರೆ.
Laxmi News 24×7