ಚಿಕ್ಕಬಳ್ಳಾಪುರ: ಡಿಸಿಸಿ ಬ್ಯಾಂಕ್ ನಿಮ್ಮ ಅಪ್ಪನ ಅಸ್ತಿನಾ..? ಹೀಗಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ ಆಗಿದೆ. ಈಗಲೂ ಕೆಲ ಸ್ವಾರ್ಥಿಗಳು ಡಿಸಿಸಿ ಬ್ಯಾಂಕ್ ಕೋಚಿಮುಲ್ ಕಪಿಮುಷ್ಠಿಯಲ್ಲಿ ಇಟ್ಕೊಂಡು ರಾಜಕಾರಣ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಇದಕ್ಕೆ ನಮ್ಮ ಸರ್ಕಾರ ಇರೋವರೆಗೂ ಅವಕಾಶ ಕೊಡೋದಿಲ್ಲ ಅಂತ ನೇರವಾಗಿ ಹೇಳ್ತೇನೆ ಅಂತ ಸವಾಲು ಹಾಕಿದರು
ಇವತ್ತು ಜಿಲ್ಲಾ ಸಹಕಾರಿ ಬ್ಯಾಂಕಿಗೆ 2500 ಸಂಘಗಳನ್ನು ಮಾಡಿದ್ದೀವಿ. ಎಷ್ಟು ಕೋಟಿ ಸಾಲ ಕೊಟ್ಟಿದ್ದೀರಿ..? ತಾರತಮ್ಯ ಯಾಕೆ..? ಕೆಜಿಎಫ್ ಶ್ರೀನಿವಾಸಪುರಕ್ಕೆ ಮಾತ್ರನಾ..? ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆನಾ..? ನಿಮ್ಮ ಅಪ್ಪನಾ ಆಸ್ತಿನಾ ಡಿಸಿಸಿ ಬ್ಯಾಂಕ್..? ಇದು ಕೇಂದ್ರ ಸರ್ಕಾರದ ಹಣ. ಇದು ಗೋವಿಂದೇ ಗೌಡರದು ಅಲ್ಲ, ರಮೇಶ್ ಕುಮಾರ್ ದು ಅಲ್ಲ ಅಂತ ಹೇಳಬಯಸುತ್ತೇನೆ ಎಮದು ಕಿಡಿಕಾರಿದರು.
ಅಲ್ಲದೆ ಸದ್ಯದಲ್ಲಿ ಎಲ್ಲಾ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತೇವೆ ಎಂದರು.
Laxmi News 24×7