Breaking News

ಕ್ಯಾಸಿನೊಗಳಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಆಪ್ತ ಸ್ನೇಹಿತನ ವಿರುದ್ಧ ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಸಂಜಾನಿ ಗಲ್ರಾನಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

Spread the love

ಬೆಂಗಳೂರು: ಕ್ಯಾಸಿನೊಗಳಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಆಪ್ತ ಸ್ನೇಹಿತನ ವಿರುದ್ಧ ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಸಂಜಾನಿ ಗಲ್ರಾನಿ ಕೋರ್ಟ್​ ಮೆಟ್ಟಿಲೇರಿದ್ದಾರೆ. ಕೋರ್ಟ್​ ಸೂಚನೆ ಮೇರೆಗೆ ನಗರದ ಇಂದಿರಾನಗರ ಠಾಣೆಯಲ್ಲಿ ಸಂಜನಾ ಆಪ್ತ ಸ್ನೇಹಿತ ರಾಹುಲ್ ತೋನ್ಸೆ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ದೂರಿನಲ್ಲಿ ಏನಿದೆ?
ನನ್ನ ಸ್ನೇಹಿತನಾದ ರಾಹುಲ್​​, ಆತ ಹೇಳಿದ ಕಡೆಯಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ, ರಾಮಕೃಷ್ಣ ಮತ್ತು ರಾಗೇಶ್ವರಿ ಜೊತೆ ಸೇರಿ ಅವರ ಖಾತೆಗೆ ನನ್ನಿಂದ ಹಣವನ್ನು ಹಾಕಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಹಣ ಹಾಕಿಸಿಕೊಂಡರು. ಇಲ್ಲಿಯವರೆಗೂ ಯಾವುದೇ ಲಾಭಾಂಶವನ್ನ ನೀಡಿಲ್ಲ. ನಾನು ಹಲವಾರು ಬಾರಿ ಹಣವನ್ನು ನೀಡುವಂತೆ ಕೇಳಿದ್ದರೂ ಹಣ ಹಿಂತಿರುಗಿಸಿಲ್ಲ. ನಾನು ನೀಡಿದ ಹಣವನ್ನು ಮೂರು ಜನರು ಕಾನೂನು ಬಾಹಿರ ಚಟುವಟಿಕೆಯಲ್ಲಿ ಹೂಡಿಕೆ ಮಾಡಿ ಲಾಭ ಮಾಡಿಕೊಂಡಿದ್ದಾರೆ. ನನ್ನ ಹಣ ಹಿಂತಿರುಗಿಸದೆ ಮೋಸ ಮಾಡಿದ್ದಲ್ಲದೆ, ನನ್ನ ಘನತೆಗೆ ಧಕ್ಕೆಯಾಗುವಂತಹ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಮೂವರು ಕಲಂ: 34, 12(ಬಿ), 107, 354, 406, 420, 506 ಐಪಿಸಿ ಕಲಂಗಳ ಅಡಿಯಲ್ಲಿ ಆರೋಪವೆಸಗಿದ್ದಾರೆ. ಹಾಗಾಗಿ ಮೂವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ