Breaking News

ಡಿಕೆಶಿಗೆ ಮತ್ತೊಂದು ಸಂಕಷ್ಟACBಗೆ ದೂರು ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ

Spread the love

ಬೆಂಗಳೂರು: ಸುದ್ದಿಗೋಷ್ಠಿ ವೇಳೆಯಲ್ಲಿ ಮಾಜಿ ಕಾಂಗ್ರೆಸ್‌ ಸಂಸದ ವಿ.ಎಸ್‌.ಉಗ್ರಪ್ಪ ಹಾಗೂ ಸಲೀಂ ಅವರು ಶಾಸಕ ಡಿ.ಕೆ ಶಿವಕುಮಾರ್‌ ಅವರು ಮಾತನಾಡಿದ್ದ ಮಾತಿಗೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಎನ್ನುವವರು ACBಗೆ ದೂರು ಸಲ್ಲಿಸಿದ್ದಾರೆ. ACBಗೆ ಸಲ್ಲಿಸರುವ ದೂರಿನಲ್ಲಿ ಸುದ್ದಿಗೋಷ್ಠಿ ವೇಳೆಯಲ್ಲಿ ಮಾಜಿ ಕಾಂಗ್ರೆಸ್‌ ಸಂಸದ ವಿ.ಎಸ್‌.ಉಗ್ರಪ್ಪ ಹಾಗೂ ಸಲೀಂ ಅವರು ಮಾತನಾಡಿರುವ ವಿಡಿಯೋ/ಆಡಿಯೋ ತುಣಕನ್ನು ಕೂಡ ನೀಡಿದ್ದು, ಇದೊಂದು ಗಂಭೀರವಾದ ವಿಷಯವಾಗಿದ್ದು, ಈ ಬಗ್ಗೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಇದೇ ವೇಳೆ ದೂರು ಸ್ವೀಕರಿಸಿರುವ ಎಸ್‌ಸಿಬಿ ಮುಂದಿನ ಕ್ರಮದ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.

ಅಂದು ಏನು ನಡೆದಿತ್ತು? ಅಂದು ಸುದ್ದಿಗೋಷ್ಠಿಯಲ್ಲಿ : ವಿ.ಎಸ್. ಉಗ್ರಪ್ಪ ಮತ್ತು ಸಲೀಂ ಮಾತನಾಡುತ್ತಾ, ಡಿ. ಕೆ. ಶಿವಕುಮಾರ್ ಒಬ್ಬ ದೊಡ್ಡ ಕಮಿಷನ್ ಗಿರಾಕಿ, 12% ಕಮಿಷನ್ ಹೊಡೆಯುತ್ತಿದ್ದ. ಡಿ ಕೆ ಹುಡುಗರ ಹತ್ತಿರ 50-100 ಕೋಟಿ ಇದೆ ಅಂಥ ಹೇಳಿದ್ದರು.


Spread the love

About Laxminews 24x7

Check Also

ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಮನವಿ

Spread the loveಬೆಳಗಾವಿ : ನಗರದ ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಜಿಲ್ಲಾ ನೇಕಾರರ ಬಳಗದ ಸದಸ್ಯರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ