Breaking News

ಎಲ್ಲರಿಗೂ ಒಂದು ಟಂಗ್ ಇರಬೇಕು, ಎರಡು ನಾಲಿಗೆ ಇರಬಾರದು ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು

Spread the love

ಕಲಬುರಗಿ: ಎಲ್ಲರಿಗೂ ಒಂದು ಟಂಗ್ ಇರಬೇಕು, ಎರಡು ನಾಲಿಗೆ ಇರಬಾರದು ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಹೆದರಿಸೋರನ್ನ ನೋಡಿದ್ದೇನೆ
ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮಗಳ ಜೊತೆ ಖಾರವಾಗಿ ಮಾತನಾಡಿದ ಸಿದ್ದರಾಮಯ್ಯ.. ಮೊದಲು ಯಡಿಯೂರಪ್ಪ ಆಪರೇಷನ್ ಕಮಲ ಮಾಡಿದ್ರು ಎಂದು ಹೇಳಿದ್ರು. ಈಗ ನನ್ನ ಹೆಸರು ಹೇಳ್ತಿದ್ದಾರೆ. ನನ್ನ ವಿರುದ್ಧ ಜನರನ್ನ ಎತ್ತಿಕಟ್ಟೋದಕ್ಕೆ, ಮೈಸೂರು ಜನರನ್ನ ಎತ್ತಿಕಟ್ಟೋಕೆ ಹೀಗೆ ಮಾತಾಡ್ತಿದ್ದಾರೆ ಎಂದು ಕಿಡಿಕಾರಿದರು.

ಈ ಕಾರಣಕ್ಕೆ ಸರ್ಕಾರ ಬಿದ್ದು ಹೋಯ್ತು..
ಇವರು ಸಿಎಂ ಇದ್ದಾಗ ಎಲ್ಲಿದ್ರು? ವೆಸ್ಟೆಂಡ್ ಹೋಟೆಲ್​ನಲ್ಲಿ ಇರುತ್ತಿದ್ದರು. ಕುಮಾರಸ್ವಾಮಿ ಒಬ್ಬ ಮಂತ್ರಿಯನ್ನೂ ಭೇಟಿಯಾಗಲಿಲ್ಲ. ಶಾಸಕರನ್ನು ಭೇಟಿ ಆಗಿಲ್ಲ. ಈ ಕಾರಣಕ್ಕಾಗಿ ಇವರ ಸರ್ಕಾರ ಬಿದ್ದು ಹೋಗಿದೆ. ನನ್ನನ್ನ ಕಂಡ್ರೆ ಕುಮಾರಸ್ವಾಮಿಗೆ ಭಯ ಅಲ್ವಾ? ಭಯ ಇದ್ರೆ ತಾನೆ ಟಾರ್ಗೆಟ್ ಮಾಡೋದಲ್ವಾ ಅದಕ್ಕೆ ಟಾರ್ಗೆಟ್ ಮಾಡೋದು. ಕಾಲ್ ಕೆರೆದುಕೊಂಡು ಜಗಳಕ್ಕೆ ಬರ್ತಾರೆ. ಹೆದರಿಸೋರನ್ನ, ಬೇದರಿಸೋರನ್ನ ಬಹಳಷ್ಟು ಜನರನ್ನ ನಾನು ರಾಜಕೀಯದಲ್ಲಿ ಬಹಳಷ್ಟು ನೋಡಿದ್ದೇನೆ. ದೇವೇವೆಗೌಡರ ಸಿಎಂ ಆದ್ಮೇಲೆ ಕುಮಾರಸ್ವಾಮಿ ರಾಜಕೀಯಕ್ಕೆ ಬಂದ್ರು. ದೇವೇಗೌಡರು ವಿರೋಧಪಕ್ಷದ ನಾಯಕರಾಗಿದ್ದರು. ಹಾಗಾದ್ರೆ ಅದು ಪುಟುಗೋಷಿನಾ? ಸಿಎಂ ಆಗಿದ್ದವರು ಜವಾಬ್ದಾರಿಯಿಂದ ಮಾತಾಡಬೇಕು. ವ್ಯಯಕ್ತಿಯವಾಗಿ ಮಾತನಾಡಬಾರದು ಎಂದು ಕಿಡಿಕಾರಿದರು.


Spread the love

About Laxminews 24x7

Check Also

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮೃತಪಟ್ಟ ಕುಟುಂಬಗಳಿಗೆ ₹5 ಲಕ್ಷ ಪರಿಹಾರ

Spread the love ಬೆಂಗಳೂರು: ಮೈಕ್ರೋ ಫೈನಾನ್ಸಿಯರ್​ಗಳ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಜನರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ