Breaking News

ಯುವತಿಗಾಗಿ ಹೊಡೆದಾಟ : ಕೊಲೆಯಲ್ಲಿ ಅಂತ್ಯವಾದ ಜಗಳ

Spread the love

ಬೆಂಗಳೂರು : ಯುವತಿಯ ವಿಚಾರಕ್ಕೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂವರು ಆರೋಪಿಗಳಾದ ನಯೀಮ್, ಮೋಹಿನ್, ವಸೀಮ್ ಎಂಬಾತನನ್ನು ಘಟನೆ ನಡೆದ 8 ಗಂಟೆಯೊಳಗೆ ಹೆಚ್‌ಎಎಲ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ಲಿಖಿತ್ ಮತ್ತು ಅರೋಪಿಗಳು ಎಲ್ಲರೂ ಒಂದೇ ಏರಿಯಾದವರು.

ಯುವಕರ ಗುಂಪುಗಳ ನಡುವೆ ಹಣ ಮತ್ತು ಯುವತಿಯ ವಿಚಾರವಾಗಿ ಗಲಾಟೆ ನೆಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಲಿಖಿತ್ ಈ ಮೊದಲು ಸಿದ್ದಿಕ್ ಎಂಬಾತನ ಬಳಿ ಸಾಲ ಪಡೆದಿದ್ದ. ಹಣ ವಾಪಸ್ ಕೇಳಿದಾಗ ಕೊಡದೆ ಅವಾಚ್ಯ ಪದಗಳಿಂದ ನಿಂದಿಸಿದ್ದ. ಹೀಗಾಗಿ ನಿನ್ನೆ ಸಹ ಮಾತನಾಡಲು ಆರೋಪಿಗಳು ಲಿಖಿತ್ಗೆ ಹೇಳಿದ್ದಾರೆ. ನಯೀಮ್ ಗುಂಪಿನ ಜೊತೆ ಮಾತನಾಡಲು ಲಿಖಿದ್ ಜತೆ ನವೀನ್ ಮತ್ತು ಕದಿರೇಶ್ ಎಂಬುವರು ಬಂದಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಲಿಖಿತ್ಗೆ ಡ್ರ್ಯಾಗರ್ನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದರು.


Spread the love

About Laxminews 24x7

Check Also

ಮಕ್ಕಳ ಹಕ್ಕುಗಳ ರಕ್ಷಣೆ ಪೊಲೀಸರ ಆದ್ಯ ಕರ್ತವ್ಯ; ಪ್ರಕರಣಗಳಿಗೆ ತುರ್ತಾಗಿ ಸ್ಪಂದಿಸಲು ಪೊಲೀಸರಿಗೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಕರೆ

Spread the loveಬೆಂಗಳೂರು : ಮಕ್ಕಳ ಹಕ್ಕುಗಳ ರಕ್ಷಣೆಯ ಉಲ್ಲಂಘನೆ ಪ್ರಕರಣಗಳಿಗೆ ತುರ್ತಾಗಿ ಸ್ಪಂದಿಸಿ, ವರದಿ ಮಾಡಿಕೊಳ್ಳುವ ಮೂಲಕ ಮಕ್ಕಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ