Breaking News

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಒಬ್ಬ ಒಳ್ಳೆಯ ಶಾಸಕ. ಆತನಿಗೆ ಅನ್ಯಾಯ ಆಗಬಾರದಾಗಿತ್ತು: ರಮೇಶ ಜಾರಕಿಹೊಳಿ

Spread the love

ಬೆಳಗಾವಿ: ಬೆಂಗಳೂರು ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ  ನಡೆದದ್ದು, ಕಾಂಗ್ರೆಸ್ ಗಲಾಟೆ ಅದಕ್ಕೂ ನಮಗೂ ಸಂಬಂಧವಿಲ್ಲ  ಅಂತಾ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 74 ನೇ ಸ್ವಾತಂತ್ರೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಸತ್ಯಶೋಧನಾ ಸಮಿತಿ ರಚಿಸಿದ್ದಾರೆ. ಅದರಿಂದಲೇ ಸಂತ್ಯಾಂಶ ಹೊರ ಬರಲಿದೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಒಬ್ಬ ಒಳ್ಳೆಯ ಶಾಸಕ. ಆತನಿಗೆ ಅನ್ಯಾಯ ಆಗಬಾರದಾಗಿತ್ತು. 

ಸರ್ಕಾರ ಶಾಸಕ ಶ್ರೀನಿವಾಸ ಮೂರ್ತಿಗೆ ಸಂಪೂರ್ಣ ಸಪೋರ್ಟ್ ಮಾಡಲಿದೆ.   ಬರುವ ಗುರುವಾರ ನಡೆಯುವ  ಸಚಿವ ಸಂಪುಟದಲ್ಲಿ ಈ ಸಂಬಂಧ ಕಠಿಣ ನಿರ್ಧಾರ ತಗೆದುಕೊಳ್ಳಲಾಗುವುದು.  ಗೃಹ ಸಚಿವರು,  ಪೊಲೀಸರು ಸಮರ್ಥರಿದ್ದಾರೆ ಪ್ರಕರಣವನ್ನು  ಸರಿಪಡಿಸುತ್ತಾರೆ.  ವಿಚಾರ ಹಂತದಲ್ಲಿದಲ್ಲಿರುವುದರಿಂದ ಈ ಬಗ್ಗೆ ಮಾಡುವುದು ಸೂಕ್ತವಲ್ಲ ಎಂದರು. 

ಯಾವುದೇ ವಿಷಯದಲ್ಲಿ ದುಡುಕುವುದು ಸೂಕ್ತವಲ್ಲ. ಕಾನೂನು ಕೈಗೆತ್ತಿ ಕೊಳ್ಳುವ ಬದಲು ಕಾನೂನು ಮೂಲಕ ಹೋರಾಟ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ