ಹೊಸದಿಲ್ಲಿ: ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಎರಡು ವರ್ಷಗಳ ನಂತರ ಪತಿ ಅಭಿಶೇಕ್ ಬಚ್ಚನ್ ಹಾಗೂ ಪುತ್ರಿ ಆರಾಧ್ಯರೊಂದಿಗೆ ಪ್ಯಾರಿಸ್ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಶುಕ್ರವಾರ ರಾತ್ರಿ ಐಶ್ವರ್ಯ ರೈ ತನ್ನ ಪತಿ ಹಾಗೂ ಪುತ್ರಿಯೊಂದಿಗೆ ಮುಂಬೈ ಏರ್‌ಪೋರ್ಟ್‌ನಿಂದ ವಿದೇಶಕ್ಕೆ ಹಾರಿದರು. ಐಶ್ವರ್ಯ ಅವರಿಗೆ ಎರಡು ವರ್ಷಗಳ ನಂತರ ಮೊದಲ ವಿದೇಶ ಪ್ರವಾಸವಾಗಿದೆ.
ʻಐಶ್ವರ್ಯ ಅವರು ಲಿ ಡೆಫಿಲಿ ಓರೆಲ್ ನಾಲ್ಕನೇ ಆವೃತ್ತಿಯ ಫ್ಯಾಷನ್ ಶೋಗಾಗಿ ಪ್ಯಾರಿಸ್ ಪ್ರವಾಸದಲ್ಲಿದ್ದಾರೆ. ಕೋವಿಡ್ ಮುಂಜಾಗ್ರತೆ ಕಾರಣದಿಂದಾಗಿ 2019ರ ನಂತರ ಅವರಿಗೆ ಇದೇ ಮೊದಲ ವಿದೇಶ ಪ್ರವಾಸವಾಗಿದೆ. ಐಶ್ವರ್ಯ ಅವರು ಕೋವಿಡ್ ಲಸಿಕೆ ಎರಡೂ ಡೋಸ್ ಪಡೆದಿದ್ದು, ವಿದೇಶ ಪ್ರಯಾಣಕ್ಕೆ ಅರ್ಹರಾಗಿದ್ದಾರೆʼ ಎಂದು ಪಿಂಕ್‌ವಿಲ್ಲಾ ಸುದ್ದಿಸಂಸ್ಥೆ ವರದಿ ಮಾಡಿದೆ.