Breaking News

ಕೊನೆಗೂ ನನಸಾಯ್ತು ಬಿಎಂಟಿಸಿಯ ಬಹು ವರ್ಷಗಳ ಕನಸು..!

Spread the love

ಬೆಂಗಳೂರು: ಬಿಎಂಟಿಸಿಯ ಬಹು ವರ್ಷಗಳ ಕನಸು ಇಂದು ನನಸಾಗಿದೆ. ಮೊದಲ ಎಲೆಕ್ಟ್ರಿಕ್ ಬಸ್ ಇಂದು ಬಿಎಂಟಿಸಿಗೆ ಸೇರ್ಪಡೆಯಾಗಿದೆ. ಸಾರಿಗೆ ಸಚಿವ ಶ್ರೀರಾಮುಲು ಮೊದಲ ಎಲೆಕ್ಟ್ರಿಕ್ ಬಸ್ ​ಅನ್ನು ಅನಾವರಣ ಮಾಡಿದ್ದು, ಕೆಂಗೇರಿ ಡಿಪೋದಲ್ಲಿ ಮೊದಲ ವಿದ್ಯುತ್ ಚಾಲಿತ ಬಸ್ ಅನಾವರಣಗೊಂಡಿದೆ.

 

 

ಬೆಂಗಳೂರು ಸ್ಮಾರ್ಟ್​ ಸಿಟಿ ಯೋಜನೆಯಡಿ ಮೆಟ್ರೋ ಫೀಡರ್​​ ಸೇವೆಗಾಗಿ 90 ಹವಾನಿಯಂತ್ರಿತ ಎಲೆಕ್ಟ್ರಿಕ್​​ ಬಸ್​ಗಳನ್ನು ಒಟ್ಟು ವೆಚ್ಚದ ಒಪ್ಪಂದ (ಜಿಸಿಸಿ) ಆಧಾರದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಸೇವಾ ಪೂರೈಕೆಯೊಂದಿಗೆ ಬಿಎಂಟಿಸಿಗೆ ಪಡೆದುಕೊಳ್ಳಲಾಗುತ್ತದೆ. 90 ಬಸ್​ಗಳಲ್ಲಿ ಯಶವಂತಪುರ ಡಿಪೋ-8, ಕೆಆರ್​ ಪುರಂ ಡಿಪೋ-29 ಹಾಗೂ ಕೆಂಗೇರಿಯ ಡಿಪೋ-37ಕ್ಕೆ ನಿರ್ವಹಣೆಗೆ ನೀಡಲಾಗುತ್ತಿದೆ. ಒಂದು ಬಾರಿ ಜಾರ್ಜ್​ ಮಾಡಿದರೇ 120ಕಿಮೀ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಒಮ್ಮೆ ಪೂರ್ತಿ ಚಾರ್ಜ್​ ಆಗಲು 45 ನಿಮಿಷಗಳ ಕಾಲ ಚಾರ್ಜಿಂಗ್​ ಮಾಡಬೇಕಿದೆ.

 

 

ಸದ್ಯ ಸಚಿವರು ಮೊದಲ ಬಸ್ ಪರಿಶೀಲನೆ ಮಾಡಿದ್ದು, 90 ಬಸ್​ಗಳ ಹಸ್ತಾಂತರ ಕಾರ್ಯಕ್ರಮ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಕುರಿತು ಟ್ವೀಟ್​ ಮಾಡಿ ಮಾಹಿತಿ ನೀಡಿರುವ ಸಚಿವ ಶ್ರೀರಾಮುಲು, ಇಂದು ಬೆಂಗಳೂರಿನ‌ ಬೆ.ಸಾ.ಸಂಸ್ಥೆ ಘಟಕ 37 ಕೆಂಗೇರಿಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಜ್ಯದ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮೊದಲ ವಿದ್ಯುತ್ ಬಸ್ ಅನ್ನು ಪರಿಶೀಲನೆ ನಡೆಸಲಾಯಿತು.

ಸರ್ವರಿಗೂ ಸಾರಿಗೆ ಸೇವೆ ದೊರೆಯುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಜೊತೆಗೆ ಎಲೆಕ್ಟ್ರಿಕಲ್ ಸಾರಿಗೆ ವಾಹನಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಎಲೆಕ್ಟ್ರಿಕಲ್ ವಾಹನಗಳಿಂದ ಪ್ರಕೃತಿಗೆ ಅನುಕೂಲವಾಗಲಿದೆ. ಎಲ್ಲರೂ ಸಾರಿಗೆ ಇಲಾಖೆಯ ವಾಹನಗಳ ಸದುಪಯೋಗ ಪಡೆಯುವ ಮೂಲಕ ಸಂಚಾರ ದಟ್ಟಣೆಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

 


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ