ದಾವಣಗೆರೆ: ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ಹಮ್ಮಿಕೊಂಡಿದ್ದ ಪಾದಯಾತ್ರೆ ಶಾಪದಿಂದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಶಾಪದ ಹೇಳಿಕೆಯನ್ನು ನೀಡಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಸಂದರ್ಭದಲ್ಲಿ ನಾನು ಹೇಳಿಕೆ ನೀಡಿದ್ದೆ 2ಎ ಮೀಸಲಾತಿಗಾಗಿ ಶ್ರೀಗಳಿಗೆ ಪಾದಯಾತ್ರೆ ಮಾಡುವಂತೆ ಮಾಡಿದ್ದರು. ಆದರೂ, ಅವರು ನೀಡಿದ ಮಾತನ್ನು ಉಳಿಸಿಕೊಳ್ಳಲಿಲ್ಲ. ಅದೇ ಕಾರಣಕ್ಕೆ ಶ್ರೀಗಳ ಪಾದಯಾತ್ರೆ ಶಾಪ ಅವರಿಗೆ ತಟ್ಟಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಯಾರಾದ್ರು ಸರಿ ಅವರಿಗೆ ಶಾಪ ತಟ್ಟುತ್ತದೆ ಎಂದು ಕಾಶಪ್ಪನವರ್ ಪರೋಕ್ಷವಾಗಿ ಸಿಎಂ ಬಸವರಾಜ ಬೊಮ್ಮಾಯಿಗೆ ಶಾಪದ ಎಚ್ಚರಿಕೆ ನೀಡಿದ್ದಾರೆ.
ವಚನಾನಂದ ಸ್ವಾಮೀಜಿಗೆ ಟಾಂಗ್ ಕೊಟ್ಟ ಕಾಶಪ್ಪನವರ್, ವಚನಾನಂದ ಸ್ವಾಮೀಜಿ ಸಾಫ್ಟ್ ವೇರ್ ನಾವು ಹಾರ್ಡ್‍ವೇರ್, ಅವರು ಎಸಿರೂಂ ನಲ್ಲಿ ಕೂತು ಹೋರಾಟ ಮಾಡುತ್ತಾರೆ ನಾವು ಬಿಸಿಲಲ್ಲಿ ಹೋರಾಟ ಮಾಡುತ್ತೇವೆ. ಹೋರಾಟಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ ಯಾವಾಗ ಹೋಗುತ್ತಾರೋ ಅವಾಗ ಬಿಳ್ಕೋಡುಗೆ ಕೊಡುತ್ತೇವೆ ಎಂದರು.
Laxmi News 24×7