ಆರ್ಎಸ್ಎಸ್ನದ್ದು ತಾಲಿಬಾನ್ ಸಂಸ್ಕೃತಿ ಎಂದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭರ್ಜರಿ ಟಾಂಗ್ ನೀಡಿದ್ದಾರೆ. ಮಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಒಬ್ಬ ಭಯೋತ್ಪಾದಕ ಎಂದು ಗುಡುಗಿದ್ರು.
ಸಿದ್ದರಾಮಯ್ಯ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಆಡಳಿತದಲ್ಲಿ ಅನೇಕರ ಹತ್ಯೆಯಾಯ್ತು. ಅವರ ಆಡಳಿತದಲ್ಲಿ ರಾಜ್ಯದಲ್ಲಿ ತಾಲಿಬಾನ್ ಸ್ಥಿತಿಯೇ ಇತ್ತು. ರಾಜ್ಯದಲ್ಲಿ 24 ಹಿಂದೂ ಯುವಕರನ್ನು ಕೊಲೆಗೈಯಲಾಯ್ತು. ದಕ್ಷಿಣ ಕನ್ನಡದಲ್ಲಿ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ದೀಪಕ್ ರಾವ್, ಮಡಿಕೇರಿ ಕುಟ್ಟಪ್ಪ ಎಲ್ಲರೂ ಸಿದ್ದರಾಮಯ್ಯ ಆಡಳಿತಾವಧಿಯಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ರು.
ಎಟಿಎಂ ಒಳಗೆ ಹೋದ ಮಹಿಳೆಯ ಮೇಲೆ ಹಲ್ಲೆಯಾಯ್ತು. ಸುಳ್ಯದಲ್ಲಿ ಕಾಲೇಜಿಗೆ ಹೋದ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲಾಯ್ತು. ಇದೆಲ್ಲ ನೋಡಿದ್ರೆ ಸಿದ್ದರಾಮಯ್ಯ ಆಡಳಿತ ತಾಲಿಬಾನ್ ಆಡಳಿತವಾಗಿದೆ. ಇದೇ ಕಾರಣಕ್ಕೆ ನಾನು ಸಿದ್ದರಾಮಯ್ಯರನ್ನು ಭಯೋತ್ಪಾದಕ ಎಂದು ಕರೆಯುತ್ತೇನೆ. ಸಿದ್ದರಾಮಯ್ಯ ಆಡಳಿತದಲ್ಲಿ ರಾಜ್ಯದಲ್ಲಿ ಪ್ರತಿ ದಿನ ಕೊಲೆ, ಸುಲಿಗೆಗಳು ನಡೆಯುತ್ತಿದ್ದವು ಎಂದು ಕಿಡಿ ಕಾರಿದ್ದಾರೆ.
Laxmi News 24×7