Breaking News

ನಾಳೆ ಸಿಲಿಕಾನ್ ಸಿಟಿಯ ಈ ಭಾಗದ ಜನರಿಗೆ ಕಾಡಲಿದೆ ವಿದ್ಯುತ್ ಸಮಸ್ಯೆ : ಬೆಸ್ಕಾಂ ನಿಂದ ಮಾಹಿತಿ

Spread the love

ಬೆಂಗಳೂರು: ಸಿಲಿಕಾನ್ ಸಿಟಿಯ ಹಲವು ಪ್ರದೇಶಗಳಲ್ಲಿ ನಾಳೆ ಬುಧವಾರ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆವರೆಗೂ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಮತ್ತು ಅಗತ್ಯ ಕೆಲಸಗಳನ್ನು ನಡೆಸಬೇಕಾದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇನ್ನು ಸೋಲದೇವನಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ಹಾಗೂ ಐಐಎಚ್‌ಆರ್, ಕುಂಬಾರಹಳ್ಳಿ, ಕಸಘಟ್ಟಪುರ, ಕೆಂಪಾಪುರ, ದೊಡ್ಡಬ್ಯಾಲದಕೆರೆ, , ಮಾದಪ್ಪನಹಳ್ಳಿ ಮುಂತಾದ ಸುತ್ತಮುತ್ತ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ಸಮಸ್ಯೆ ಕಾಡಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಹಾಗೆ ನಗರಗಿರಿ ಟೌನ್ಶಿಪ್, ಕೆ. ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಹೆಣ್ಣೂರು ಉಪ-ಕೇಂದ್ರ ವ್ಯಾಪ್ತಿಯಲ್ಲೂ ಬುಧವಾರ ವಿದ್ಯುತ್ ಸ್ಥಗಿತ ವಾಗಲಿದ್ದು, ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ