ಬೆಳಗಾವಿ ನಗರದ ಸನ್ಮಾನ ಹೋಟೆಲ್ ಹಿಂಬದಿಯ ಎಮ್ ಜಿ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಯಾಟ್ಸನ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಮತ್ತು ಪ್ಯಾಟ್ಸನ್ ಚಿಟ್ಸ ಪ್ರಾವೇಟ ಈ ಎರಡು ಸಂಸ್ಥೆಯಿಂದ ಸುಮಾರು 20 ಬಡ ಜನರ ಮೇಲೆ ಮೋಸಮಾಡಲಾಗುದೆ ಎಂದು ಆರೋಪಿಸಿ ಇಂದು ಸಹಾಯಕ ರಿಜಿಸ್ಟ್ರಾರ್ ಮತ್ತು ಉಪ ಸಹಾಯಕ ರಿಜಿಸ್ಟ್ರಾರ್ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ರೋಹಿತ್ ಚಿಮಟೆ ಪ್ಯಾಟ್ಸನ್ ಸಂಸ್ಥೆಯ ಅದ್ಯಕ್ಷರಾದ ಅನಿಲ ಪರಗೌಡಾ ಪಾಟೀಲ , ರಾಘವೇಂದ್ರ ಪಾಟಕರ ಮತ್ತು ಸಿ ಇ ಓ ಶಶಿಕಾಂತ ಕಬ್ಬೂರಿ ಇವರು ಅನದಿಕೃತವಾಗಿ ನಮ್ಮ ಹೆಸರಿನಲ್ಲಿ ಧಾಖಲೆ ಸೃಷ್ಟಿಸಿ ನಮ್ಮ ಹೆಸರಿನಲ್ಲಿ ಸಾಲದ ಖಾತೆ ತಯಾರಿಸಿ ನಾವು ಹಣ ಪಡೆದುಕೊಂಡತೆ ಮಾಡಿ ನಮಗೆ ಮೋಸ ಮಾಡಿ ಸಂಸ್ಥೆಯ ಸಾಲಗಾರ ಎಂದು ನಮೂದುಸಿರುತ್ತಾರೆ. ಇದರಿಂದಾಗಿ ನಮ್ಮ ಮೇಲೆ ಅನ್ಯಾಯ ಮಾಡಿ ಅಕ್ರಮ ಲಾಭ ಮಾಡಿಕೊಂಡಿರುತ್ತಾರೆ ಹಾಗೂ ಸಂಸ್ಥೆಯ ಗ್ರಾಹಕರಿಗೆ, ಠೇವಣಿ ದಾರರಿಗೆ ಸದಸ್ಯರಿಗೆ ಮೋಸ ಮಾಡಿ ಆಕ್ರಮ ಹಣಮಾಡಿ ಸರ್ಕಾರಕ್ಕೆ ಲೆಕ್ಕ ತೋರುಸದೆ ಬೇನಾಮಿ ಆಸ್ತಿ ಮಾಡಿರುತ್ತಾರೆ, ಕಾರಣ ಸದರಿ ವ್ಯಕ್ತಿಗಳ ಆಸ್ತಿ ಪಾಸ್ತಿ ಗಳನ್ನು ಮುಟ್ಟುಗೋಲು ಮಾಡಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕು ಹಾಗೂ ಈ 20 ಜನರಿಗೆ ಆದ ಅನ್ಯಾಯ ಸರಿಪಡಿಸಿ ನ್ಯಾಯ ಕೊಡುಸಬೇಕು ಎಂದು ಜಿಲ್ಲಾ ರಿಜಿಸ್ಟ್ರಾರ್ ಮತ್ತು ಸಹಾಯಕ ರಿಜಿಸ್ಟ್ರಾರ್ ರವರಿಗೆ ಮನವಿ ಸಲ್ಲಿಸಲಾಗಿದೆ ಇಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕುಟುಂಬ ಸಮೇತ ಸತ್ಯಾಗ್ರಹ ಮಾಡಲಾಗುವದು ಎಂದರು.
ನೊಂದ ಬಡ ಅಟೋ ಚಾಲಕ ಮಾತನಾಡಿ ಅಲ್ತಾಫ್ ಬೇಅರಿ ಮಾತನಾಡಿ ನಾನು ಬೆಳಗಾವಿಯ ನಗರದಲ್ಲಿನ ಅಟೋ ಚಾಲಕನಿದ್ದು ಪ್ಯಾಟ್ಸನ್ ಗ್ರುಪ್ ದವರು ನ್ನ ಮೇಲೆ 30 ಲಕ್ಷ ರೂಪಾಯಿ ಸಾಲ ಇದೆ ಎಂದು ಪೋಲಿಸ್ ರೊಂದಿಗೆ ಬಂದು ನನಗೆ ತೊಂದರೆ ನಿಡುತ್ತಿದ್ದಾರೆ ನಾನು ಬಡವ ಎಲ್ಲಿಂದ ಹಣ ತರಲಿ ಇದೆ ರೀತಿ ನಮಗೆ ತೊಂದರೆ ನಿಡಿದರೆ ನಾಉ ನನ್ನ ಕುಟುಂಬ ಸಮೇತ ಜಿಲ್ಲಾಧಿಕಾರಿಗಳ ಕಛೇರಿ ಯಲ್ಲಿ ಸತ್ಯಾಗ್ರ ಮಾಡುತ್ತೆನೆ ನಾನು ಯಾವುದೆ ಸ್ವಂತ ಆಸ್ತಿ ಹೋಂದಿಲ್ಲಾ ಆದರೆ ಈ ಸಂಸ್ಥೆಗಳಿಂದ ಲಕ್ಷಾಂತರ ಹಣ ಸಾಲ ಪಡೆದಿದ್ದೆನೆ ಎಂದು ನೋಟಿಸ ಬಂದಿದೆ ಎಂದು ತನ್ನ ಅಳಲು ತೋಡಿಕೊಂಡರು.
ಪ್ರವಿಣ ಪವಾರ ಮಾತನಾಡಿ ನಾನು ಮತ್ತು ನನ್ನ ಸಹೋದರರು ಚಿಟ್ಸ ಫಡ ಖಾತೆ ತೆರೆದಿದ್ದು ನಮಗೆ ಹಣ ಪರತ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು
ಈ ಸಂದರ್ಭದಲ್ಲಿ ಪ್ರಕಾಶ ಸುತಾರ, ಮೀಶಿನ ಬುಡನ್ನವರ, ಸತೀಶ ರಾಣವಗೋಳ, ಅನಿಲ ಮೋಕಾಶಿ, ಕೀರಣ ಬಡಿಗೇರ, ಬಾಬಾಸಾಹೇಬ ಗಾಯಕವಾಡ, ಗೋಕುಳ ಶಿಂದೆ, ಶಿವರಾಜ ಸುತಾರ, ರಫೀಕ ಫಣಿಬಂದ, ರವೀದ್ರ ಶೇಂಡೆ, ಉಮೇಶ ಸಿದ್ನಾಳ ಅಣವಗೋಳ ಮೊದಲಾದವರು ಉಪಸ್ಥಿತರಿದ್ದರು .