ಧಾರವಾಡ: ಜೆಡಿಎಸ್ ನವಲಗುಂದ ಶಾಸಕ ಕೋನರೆಡ್ಡಿ ಜೆಡಿಎಸ್ ತೊರೆದು ಕೈ ಪಡೆ ಸೇರ್ತಾರಾ ಎಂಬ ಚರ್ಚೆ ಶುರುವಾಗಿದೆ. ಕೋನರಡ್ಡಿ ಜೆಡಿಎಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮೊನ್ನೆಯಷ್ಟೇ ನಡೆದ ಹು-ಧಾ ಪಾಲಿಕೆ ಚುನಾವಣೆ ಸೋಲು ಹಿನ್ನೆಲೆ ಹೊಣೆ ಹೊತ್ತು ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬೆನ್ನಲ್ಲೇ 2023 ಚುನಾವಣೆಗೆ ಕೋನರಡ್ಡಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕೈ ನಾಯಕರ ಜೊತೆ ಕೋನರೆಡ್ಡಿ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ.. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯರ ಜತೆ ಕೋನರಡ್ಡಿ ಒಳ್ಳೆಯ ಒಡನಾಟ ಇಟ್ಟಕೊಂಡಿದ್ದಾರಂತೆ. ಹೀಗಾಗಿ ಸಿದ್ದರಾಮಯ್ಯರ ಮೂಲಕ ಕಾಂಗ್ರೆಸ್ ಸೇರಲು ಕಸರತ್ತು ನಡೆಸಿದ್ದಾರಂತೆ.
ನವಲಗುಂದದಲ್ಲಿ ಕಾಂಗ್ರೆಸ್ ಸೇರಿ ಮುನೇನಕೊಪ್ಪರಿಗೆ ಸೆಡ್ಡು ಹೊಡೆಯಲು ಕೋನರಡ್ಡಿ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಉಕ ಭಾಗದಲ್ಲಿ ಜೆಡಿಎಸ್ ಸಂಘಟನಾತ್ಮಕ ಶಕ್ತಿ ಇಲ್ಲ.. ಜೆಡಿಎಸ್ ಪಕ್ಷ ಸಂಘಟನೆಗೆ ವರಿಷ್ಠರು ಆಸಕ್ತಿ ತೋರಿಲ್ಲ..ಎಂಬ ವಿಚಾರಗಳ ಬಗ್ಗೆ ದೇವೆಗೌಡರ ಭೇಟಿ ಮಾಡಿ ಕೋನರೆಡ್ಡಿ ಚರ್ಚೆ ನಡೆಸಿದ್ದಾರಂತೆ.