ರಾಯಚೂರು: ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದೆ ರೋಗಿಯೋರ್ವ ಆಸ್ಪತ್ರೆ ಆವರಣದಲ್ಲಿಯೇ ಮಲಗಿ ಪರದಾಡಿದ ಘಟನೆ ಜಿಲ್ಲೆಯ ರಿಮ್ಸ್ ಆಸ್ಪತ್ರೆ ಬಳಿ ನಡೆದಿದೆ.
ಯಾದಗಿರಿ ಜಿಲ್ಲೆಯಿಂದ ಆಸ್ಪತ್ರೆಗೆ ಬಂದಿದ್ದ ರೋಗಿಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸೂಚಿಸಿದ್ದರು ಎನ್ನಲಾಗಿದೆ. ಅರ್ಧ ಗಂಟೆಯಿಂದ ಆಂಬ್ಯುಲೆನ್ಸ್ಗಾಗಿ ಕಾದರೂ ಬಾರದ ಆಂಬ್ಯುಲೆನ್ಸ್ ನಿಂದ ಕಂಗಾಲಾದ ರೋಗಿ ಆಸ್ಪತ್ರೆ ಫುಟ್ಪಾತ್ ಮೇಲೆಯೇ ಮಲಗಿದ್ದಾನೆ. ಫುಟ್ಪಾತ್ ಮೇಲೆ ಮಲಗಿದ ಸಾಕಷ್ಟು ಹೊತ್ತಿನ ಬಳಿಕ ಆಂಬ್ಯುಲೆನ್ಸ್ ಆಗಮಿಸಿದ್ದು ಬಳಿಕ ಆಂಬ್ಯುಲೆನ್ಸ್ ನಲ್ಲಿ ತೆರಳಿದ್ದಾನೆ.