Breaking News

ಸುರೇಶ್ ಅಂಗಡಿ ಕೊರೊನಾಗೆ ಇಲ್ಲೇ ಚಿಕಿತ್ಸೆ ಪಡೆದಿದ್ದರೆ ಉಳಿಯುತಿದ್ದರೆನೋ, ಏಮ್ಸ್ ನಲ್ಲಿ ಚಿಕಿತ್ಸೆ ಪಡೆದರೂ ಬದುಕಲಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್

Spread the love

ಬೆಳಗಾವಿ: ಸುರೇಶ್ ಅಂಗಡಿ ಕೊರೊನಾಗೆ ಇಲ್ಲೇ ಚಿಕಿತ್ಸೆ ಪಡೆದಿದ್ದರೆ ಉಳಿಯುತಿದ್ದರೆನೋ, ಏಮ್ಸ್ ನಲ್ಲಿ ಚಿಕಿತ್ಸೆ ಪಡೆದರೂ ಬದುಕಲಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಬೆಳಗಾವಿಯ ಸಾವಗಾಂವದ ಅಂಗಡಿ ಕಾಲೇಜಿನಲ್ಲಿಡಲಾಗಿದ್ದ ದಿವಂಗತ ಸಂಸದ ಸುರೇಶ್ ಅಂಗಡಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುರೇಶ್ ನಮ್ಮನ್ನ ಅಗಲಿ ಒಂದು ವರ್ಷ ಆಗಿದೆ. ಆದರೆ ಅವರ ನೆನಪು ಇಗಲೂ ನಮ್ಮ ಮನಸ್ಸಿನಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನೇ ಅವರನ್ನು ಬೆಳಗಾವಿ ಜಿಲ್ಲಾಧ್ಯಕ್ಷ ಎಂದು ಘೋಷಣೆ ಮಾಡಿದ್ದೆ ಎಂದ ಅವರು, ಪ್ರತಿ ಬಾರಿ ಅವರು ಚುನಾವಣೆ ಗೆದ್ದಾಗ ಲಿಡ್ ಪಡೆದಿದ್ದರು. ರೈಲ್ವೇ ಸಚಿವರಾಗಿ ಅವರು ಒಂದು ವರ್ಷದಲ್ಲಿ ಬಹಳ ಸಾಧನೆ ಮಾಡಿದರು ಎಂದು ನೆನೆಪಿಸಿಕೊಂಡರು.

ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ದಾರೂಢರ ಹೆಸರು ಇಡಲು ಕಾರಣ ಸುರೇಶ್ ಅವರೇ ಎಂದ ಶೆಟ್ಟರ್, ಬೆಳಗಾವಿ ಬೆಂಗಳೂರು ರೈಲಿಗೆ ಅಂಗಡಿ ಎಕ್ಸ್ ಪ್ರೆಸ್ ಹೆಸರು ಇಡಲು ಮನವಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸು ಮಾಡಿದ ಸುರೇಶ್ ಅಂಗಡಿ ಬೆಳಗಾವಿಗೆ ಉಡಾನ್ 3 ತಂದರು ಎಂದರು.


Spread the love

About Laxminews 24x7

Check Also

ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ

Spread the loveಚಾಮರಾಜನಗರ: ಪ್ರಿಯಕರನ ಜೊತೆ ಸೇರಿ ತನ್ನ ಪತಿಗೆ ಹೊಡೆದು ಶೌಚಾಲಯ ಗುಂಡಿಗೆ ಹಾಕಿದ್ದ ಪತ್ನಿ ಹಾಗೂ ವ್ಯಕ್ತಿಗೆ ಅಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ