ಬೆಂಗಳೂರು: ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನ ಜಾರಿಗೆ ತಂದು ವರ್ಷವಾಗ್ತಿದೆ. ಈ ನಿಟ್ಟಿನಲ್ಲಿ ಅಂದಿನಿಂದಲೂ ಈ ಕಾಯ್ದೆಗಳನ್ನ ರೈತರು ವಿರೋಧಿಸಿಕೊಂಡೇ ಬರ್ತಿದ್ದಾರೆ. ಆದ್ರೆ ಕೇಂದ್ರ ಸರ್ಕಾರ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಇದೀಗ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ, ರೈತ ಸಂಘಟನೆ ಇದೇ ತಿಂಗಳ 27 ಕ್ಕೆ ಭಾರತ್ ಬಂದ್ ಗೆ ಕರೆ ನೀಡಿದೆ. ಇದೀಗ ರೈತ ಸಂಘಟನೆ ನೀಡಿರುವ ಭಾರತ್ ಬಂದ್ ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಈ ಬಂದ್ ಗೆ ಬೆಂಬಲ ನೀಡಿದೆ. ಈ ಬಂದ್ ಗೆ ರೈತ ಸಂಘಟನೆಗಳು ಬೆಂಬಲ ಸೂಚಿಸಿದ್ದು, ರಾಜ್ಯಕ್ಕೂ ಬಂದ್ ಬಿಸಿ ತಟ್ಟಲಿದೆ. ದೇಶಾದ್ಯಂತ ಬಂದ್ ಬಿಸಿ ತಟ್ಟಲಿದೆ. ಧರಣಿ, ಪ್ರತಿಭಟನೆ, ಹೆದ್ದಾರಿ ತಡೆಗಳು ನಡೆಯಲಿವೆ.
ಸಿಲಿಕಾನ್ ಸಿಟಿಯಲ್ಲಿಯೂ ಪ್ರತಿಭಟನೆಯ ಕಾವು ಜೋರಾಗಿರಲಿದ್ದು, ಟೌನ್ ಹಾಲ್ ನಿಂದ ಹಿಡಿದುಮೈಸೂರ್ ಬ್ಯಾಂಕ್ ಸರ್ಕಲ್ ವರೆಗೂ ಪ್ರತಿಭಟನೆ ನಡೆಯಲಿದೆ.
ರಾಜ್ಯ ರೈತ ಸಂಘ, ರಾಜ್ಯ ಹಸಿರು ಸೇನೆ, ರಾಜ್ಯ ಪ್ರಾಂತ ಸಂಘ, ಅಖಿಲ ಭಾರತ್ ಕಿಸಾನ್ ಸಭಾ, ಕರವೇ ನಾರಾಯಣ್ ಬಣ, ವಾಟಾಳಾ ಸಂಘ, ಕರವೇ ಪ್ರವೀಣ್ ಶೆಟ್ಟಿ ಬಣ ರೈತರ ಬಂದ್ ಗೆ ಬೆಂಬಲ ಸೂಚಿಸಿವೆ. ಆದ್ರೆ ಕೆಎಸ್‌ಆರ್ಟಿಸಿ, ಬಿಎಂಟಿಸಿ ನೈತಿಕ ಬೆಂಬಲ ನೀಡಿವೆ.