ಬೆಂಗಳೂರು: ಸೆಪ್ಟೆಂಬರ್ 27ರ ಭಾರತ್ ಬಂದ್ ಅನ್ನು ಯಶಸ್ವಿಗೊಳಿಸುವ ಸಲುವಾಗಿ ಬಹುತೇಕ ಎಲ್ಲ ಸಂಘಟನೆಗಳು ಬೆಂಬಲ ನೀಡಿವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿ ಭಾರತ ಬಂದ್ಗೆ ಬಹುತೇಕ ಸಂಘಟನೆಗಳ ಜೊತೆ ರೈತ ಸಂಘಟನೆಗಳ ಸಾಥ್ ಸಿಕ್ಕಿದೆ. ರೈತರೇ ಹೋರಾಟದ ಮುಂಚೂಣಿ ವಹಿಸಲಿದ್ದಾರೆ. ಕಾರ್ಮಿಕ ಸಂಘಟನೆಯೂ ಸಾಥ್ ನೀಡ್ತಿದೆ. ದಲಿತ ಸಮುದಾಯವೂ ಅಪಸ್ವರ ಎತ್ತಿಲ್ಲ ಬೇರೆ ಕಸುಬುಗಳ ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದಿದ್ದಾರೆ.
ನೈತಿಕತೆಯಿಂದ ಬೆಂಬಲ ಸೂಚಿಸುವಂತೆ ಎಲ್ಲರಿಗೂ ಮನವಿ ಮಾಡುತ್ತಿದ್ದೇವೆ. ಕೇವಲ ನೈತಿಕ ಬಂದ್ ಘೋಷಣೆ ಮಾಡೋದಲ್ಲ ಎಂದಿರುವ ಅವರು, ಕೆ.ಆರ್ ಪುರಂ ಮಾರುಕಟ್ಟೆಯಿಂದ ಬೆಳಗ್ಗೆ 8 ಗಂಟೆಗೆ ಪ್ರತಿಭಟನಾ ನಡಿಗೆ ಆರಂಭವಾಗಲಿದೆ. 11 ಗಂಟೆಗೆ ಟೌನ್ ಹಾಲ್‌ನಿಂದ ಮೈಸೂರು ಬ್ಯಾಂಕ್‌ವರೆಗೆ ರ್ಯಾಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಾರಿ ತೀವ್ರವಾದ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ ಬಂದ್ ವಿಚಾರವಾಗಿ ಅಪಸ್ವರ ಎತ್ತುತ್ತಿರೋರು ಸರ್ಕಾರದ ಪರವಾಗಿ ಇರೋರು ಮಾತ್ರ. ಕೇಂದ್ರ ಸರ್ಕಾರ ಎಲ್ಲವನ್ನೂ ಕಂಪನೀಕರಣ ಮಾಡ್ತಿದೆ. ರೈಲು, ಬಂದರು, ಹೆದ್ದಾರಿ ಎಲ್ಲವೂ ಖಾಸಗೀಕರಣ ಆಗಿದೆ. ಹಾಗಾಗಿ ರೈತರೂ ಖಾಸಗೀಕರಣ ಆಗಬಾರದು ಖಾಸಗೀಕರಣ ಪೂರ್ಣ ವಿರೋಧ ಮಾಡುವ ದಿಕ್ಕಿನಲ್ಲಿ ನಮ್ಮ ಹೋರಾಟ. ನಾವು ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಕೋರಿಲ್ಲ, ಯಾರು ಬೇಕಾದರೂ ಬೆಂಬಲಿಸಬಹುದು ಎಂದಿದ್ದಾರೆ.