Breaking News

ಅಪಾರ್ಟ್ಮೆಂಟ್​ನಲ್ಲಿ ಅಗ್ನಿ ದುರಂತ: ಸಿಲಿಂಡರ್ ಬಳಸುವಾಗ ಜನ ಮಾಡುವ ತಪ್ಪುಗಳೇನು..?

Spread the love

ಬೆಂಗಳೂರು: ಬೇಗೂರು ಠಾಣಾ ವ್ಯಾಪ್ತಿಯ ಅಶ್ರೀತ್ ಅಪಾರ್ಟ್‌ಮೆಂಟ್​ನಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ ಇಡೀ‌ ಸಿಲಿಕಾನ್ ಸಿಟಿ ಜನರನ್ನೇ ಶಾಕ್​ಗೆ ಒಳಗಾಗುವಂತೆ ಮಾಡಿದೆ. ನಿನ್ನೆ ಮಧ್ಯಾಹ್ನ ದೇವರ ಚಿಕ್ಕನಹಳ್ಳಿಯ ಅಶ್ರೀತ್ ಅಪಾರ್ಟ್‌ಮೆಂಟ್​ನ ಮೂರನೇ ಮಹಡಿಯಲ್ಲಿ ಸಂಭವಿಸಿರೋ ಫೈರ್ ಆಕ್ಸಿಡೆಂಟ್​ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.. ಲಕ್ಷ್ಮಿದೇವಿ ಅನ್ನೋ 82 ವರ್ಷದ ವೃದ್ಧೆ ಹಾಗೂ 51 ವರ್ಷದ ಭಾಗ್ಯ ರೇಖಾ ಅನ್ನೋ ಮಹಿಳೆ ಸಾವನ್ನಪ್ಪಿದ್ದಾರೆ.

ಅಷ್ಟಕ್ಕೂ ಭೀಕರ ದುರಂತಕ್ಕೆ ಕಾರಣವೇನು? ಅಪಾರ್ಟ್ಮೆಂಟ್​ನಲ್ಲಿ ಸೇಫ್ಟಿ ಮೆಸರ್ಸ್ ಇರಲಿಲ್ವಾ? ಅಪಾರ್ಟ್ಮೆಂಟ್ ಬಗ್ಗೆ ಬಿಬಿಎಂಪಿಯೂ ನಿರ್ಲಕ್ಷ್ಯ ವಹಿಸಿತ್ತಾ? ನಿರ್ಲಕ್ಷ್ಯಕ್ಕೆ ಕಣ್ಮುಂದೆಯೆ ಎರಡು ಅಮಾಯಕ ಜೀವಗಳು ಬಲಿ ಆದ್ವಾ? ಅನ್ನೋ ಪ್ರಶ್ನೆಗಳು ಕೂಡ ಎದ್ದಿವೆ. ಇದರ ಜೊತೆಗೆ ಕೆಲವೊಮ್ಮೆ ಜನರು ಕೂಡ ಸಿಲಿಂಡರ್ ಬಳಸುವ ವಿಧಾನದಲ್ಲಿ ತಪ್ಪು ಮಾಡುತ್ತಲೇ ಇರುತ್ತಾರೆ.

 

 

ಸಿಲಿಂಡರ್ ಬಳಕೆ ವೇಳೆ ಜನ ಮಾಡೋ ತಪ್ಪುಗಳೇನು..?

  • ಅಡುಗೆ ಮಾಡಿದ ನಂತರ ಸ್ಟೌ ಮತ್ತು ಸಿಲಿಂಡರ್ ಟ್ಯೂಬ್ ಶುಚಿಯಾಗಿ ಕ್ಲೀನ್‌ ಮಾಡಿರಲ್ಲ
  • ಅಡುಗೆ ಮಾಡಿದ ನಂತರ ಮೇನ್ ರೆಗ್ಯುಲೇಟರ್ ಆಪ್ ಮಾಡದೆ, ಸ್ಟೌವ್ ಸ್ವಿಚ್ ಮಾತ್ರ ಆಫ್ ಮಾಡ್ತಾರೆ.
  • ಹೀಗೆ ಮಾಡಿದಾಗ ಸಿಲಿಂಡರ್​ಗೆ ಕನೆಕ್ಟ್ ಆಗಿರೋ ಟ್ಯೂಬ್​ನಲ್ಲಿ ಗ್ಯಾಸ್ ಉಳಿದುಕೊಂಡಿರುತ್ತೆ

ಪ್ರಮುಖವಾಗಿ ಅಡುಗೆ ಮುಗಿದ ನಂತರ ರೆಗ್ಯುಲೇಟರ್ ಸ್ವಿಚ್ ಆಫ್ ಮಾಡಬೇಕು. ಮುಖ್ಯವಾಗಿ ರಾತ್ರಿ ಸಮಯದಲ್ಲಿ ರೆಗ್ಯುಲೇಟರ್ ಆಫ್ ಮಾಡಬೇಕು. ಇಲ್ಲವಾದರೆ ರಾತ್ರಿ ಸಮಯದಲ್ಲಿ ಆ ಟ್ಯೂಬ್ ಅನ್ನ ಇಲಿ ಕಚ್ಚಿದರೆ ಗ್ಯಾಸ್ ಲೀಕ್ ಆಗೋದು ಗ್ಯಾರೆಂಟಿ. ಗ್ಯಾಸ್ ಲೀಕ್ ಆಗಿರೋದು ಕೆಲವೊಮ್ಮೆ ಗೊತ್ತೇ ಆಗಲ್ಲ. ಟ್ಯೂಬ್ ಪಂಚರ್ ಆಗಿರೋದು ಕೂಡ ಗೊತ್ತಾಗಿರಲ್ಲ. ಹೀಗಾಗಿ ನಿರಂತರವಾಗಿ ಗ್ಯಾಸ್ ಲೀಕ್ ಆಗಿರುತ್ತೆ. ಇಂತಹ ಸಂದರ್ಭದಲ್ಲಿ ರಾತ್ರಿ ವೇಳೆ ವಾಷ್ ರೂಮ್‌ಗೆ ಅಂತಾ ನಿದ್ದೆ ಕಣ್ಣಲ್ಲಿ ಲೈಟ್, ಆಫ್ ಆನ್ ಮಾಡುವಾಗಲೂ ನಾವು ಎಚ್ಚರವಾಗಿರಬೇಕು. ಗ್ಯಾಸ್ ಲೀಕ್ ಆದ ವೇಳೆ ಕೊಂಚ ಬಿಸಿಯಾದ ಬೆಳಕು ತಗುಲಿದ್ರೂ ಬ್ಲಾಸ್ಟ್ ಆಗುವ ಸಾಧ್ಯತೆ ಇರುತ್ತದೆ.

ಏನ್ಮಾಡಬೇಕು..? ಏನ್ಮಾಡಬಾರದು..?

  • ಗ್ಯಾಸ್ ಲೀಕ್ ಆಗಿರೋದು ಗೊತ್ತಾದ್ರೆ ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರವಾಗಿರಬೇಕು
  • ಯಾವುದೇ ಕಾರಣಕ್ಕೂ ಲೈಟ್ ಬಟನ್ಸ್ ಆನ್-ಆಫ್‌ ಮಾಡಬಾರದು
  • ಅಕ್ಕ-ಪಕ್ಕದ ಮನೆಯವ್ರಿಗೂ ಲೈಟ್ ಆಫ್ ಬಗ್ಗೆ ಮಾಹಿತಿ ನೀಡಬೇಕು
  • ಎಲ್​​ಪಿಜಿ ಗ್ಯಾಸ್ ಬಳಸೋರು ತುಂಬಾ ಎಚ್ಚರವಾಗಿರಬೇಕು
  • ಎಲ್​ಪಿಜಿ ಗ್ಯಾಸ್ ಕೆಲವೊಮ್ಮೆ ಲೀಕ್ ಆಗೋದು ಗೊತ್ತಾಗಲ್ಲ
  • ಗ್ಯಾಸ್ ಲೀಕ್ ಆಗಿದ್ದು ಗೊತ್ತಾದಲ್ಲಿ ಕೂಡಲೇ ಕಿಟಕಿ ಬಾಗಿಲುಗಳನ್ನ ಓಪನ್ ಮಾಡಬೇಕು
  • ಬೆಂಕಿ ಹೊತ್ತಿದಾಗ ಯಾವುದೇ ಕಾರಣಕ್ಕೂ ನೀರು ಹಾಕಿ ಆರಿಸೋಕೆ ಮುಂದಾಗಬಾರ್ದು
  • ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಬೇಕು
  • ನೀರು ಹಾಕಿ ಆರಿಸೋಕೆ ಹೋದಾಗ ಬೆಂಕಿ ಹೆಚ್ಚಾಗುವ ಸಾಧ್ಯತೆ ಇದೆ
  • ಗ್ಯಾಸ್ ನೀರು ಹಾಕೋದ್ರಿಂದ ಆಕ್ಸಿಜನ್ ಜೊತೆ ಮಿಕ್ಸ್ ಆಗಿ ಒಂದು ಲೀಟರ್ ಗ್ಯಾಸ್ ನಾಲ್ಕು ಲೀಟರ್ ನಷ್ಟು ದೊಡ್ಡದಾಗಿ ಸ್ಫೋಟವಾಗುವ ಸಾಧ್ಯತೆ ಇದೆ
  • ಈ ವೇಳೆ ಹೈಡ್ರೋಜನ್ ಬಾಂಬ್ ರೀತಿಯಲ್ಲಿ ಬ್ಲಾಸ್ಟ್ ಆಗುವ ಸಾಧ್ಯತೆಯೂ ಇರುತ್ತದೆ

Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ