Breaking News

ಎರಡು ಬಾರಿ ರಾಜ್ಯ ಸಭಾ ಸ್ಥಾನವನ್ನು ತಿರಸ್ಕರಿಸಿದ್ದೇನೆ -ಸೋನು ಸೂದ್

Spread the love

ಬಹುಭಾಷಾ ನಟ ಸೋನು ಸೂದ್​ ತಾವು ಎರಡು ಬಾರಿ ರಾಜ್ಯ ಸಭಾ ಸ್ಥಾನವನ್ನು ತಿರಸ್ಕರ ಮಾಡಿದ್ದು, ರಾಜಕೀಯ ಪ್ರವೇಶಕ್ಕೆ ತಾವು ಇನ್ನು ಸಿದ್ಧರಾಗಿರಲ್ಲ ಎಂದು ಹೇಳಿದ್ದಾರೆ.

ಐಟಿ ದಾಳಿ ನಡೆದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್​, ರಾಜಕೀಯ ಸೇರ್ಪಡೆ ಕುರಿತು ಎರಡು ಪಕ್ಷಗಳಿಂದ ಆಫರ್ ಬಂದಿದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿರೋ ಅವರು, ಮಾನಸಿಕವಾಗಿ ನಾನು ಇನ್ನು ರಾಜಕೀಯಕ್ಕೆ ಸಿದ್ಧವಾಗಿಲ್ಲ. ಈಗ ನಾನು ಮಾಡುತ್ತಿರೋ ಕೆಲಸದಲ್ಲೇ ಖುಷಿ ಇದೆ. ಒಂದೊಮ್ಮೆ ನಾನು ಮಾನಸಿಕವಾಗಿ ಸಿದ್ಧವಾದರೇ ಬಹಿರಂಗವಾಗಿ ಘೋಷಣೆ ಮಾಡಿ ಪ್ರವೇಶ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಹೀರೋ ಆಗಿ ಗುರುತಿಸಿಕೊಂಡಿರುವ ಸೋನು ಸೂದ್ ಮೇಲೆ ಐಡಿ ದಾಳಿ ಬಳಿಕ ಗಂಭೀರ ಆರೋಪ ಕೇಳಿ ಬಂದಿತ್ತು. ಐಟಿ ರೇಡ್ ಬಳಿಕ ಸೋನು ಸೂದ್​ ಮೇಲೆ 250 ಕೋಟಿಯಷ್ಟು ಅಕ್ರಮ ವ್ಯವಹಾರ ನಡೆಸಿರುವ ಆರೋಪ ಇದೆ.


Spread the love

About Laxminews 24x7

Check Also

ಅನುಮಾನಾಸ್ಪದ ವಸ್ತು ಸ್ಫೋಟ – ಬಾಲಕ ಸೇರಿ ಮೂವರ ಸ್ಥಿತಿ ಗಂಭೀರ

Spread the loveಬೀದರ್: ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡು ಓರ್ವ ಬಾಲಕ ಹಾಗೂ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಹುಮ್ನಾಬಾದ್ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ