ಬೆಳಗಾವಿ: ಜಿಲ್ಲೆಯಲ್ಲಿ ಕೊರನಾ ಸೋಂಕಿಗೆ ಬಲಿಯಾಗುತ್ತಿರುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಲಿದ್ದು, ಇಂದು ಕೂಡ 6 ಜನರು ಸಾವಿಗೀಡಾಗಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದು,ಬೆಳಗಾವಿ, ಹೊಸದಾಗಿ 288 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಹುಕ್ಕೇರಿ ತಾಲೂಕು ಸೇರಿ ಜಿಲ್ಲೆಯಲ್ಲಿ ಆರು ಜನರ ಸಾವನ್ನಪ್ಪಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 113 ತಲುಪಿದೆ.
ಒಟ್ಟು 6640 ಸೋಂಕಿತರ ಪೈಕಿ 2928 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 3599 ಸಕ್ರಿಯ ಪ್ರಕರಗಳಿವೆ.
ತಾಲೂಕಾವಾರು ಅಂಕಿ ಅಂಶ:
ಬೆಳಗಾವಿ- 125
ಚಿಕ್ಕೋಡಿ-41
ಗೋಕಾಕ- 37
ರಾಮದುರ್ಗ-5
ರಾಯಬಾಗ-1
ಬೈಲಹೊಂಗಲ- 26
ಸವದತ್ತಿ-8
ಹುಕ್ಕೇರಿ- 23
ಖಾನಾಪುರ-5
ಅಥಣಿ-11