ಉತ್ತರ ಪ್ರದೇಶ ಆಗ್ರಾದ ಮಹಿಳಾ ಕಾನ್‌ಸ್ಟೇಬಲ್ ಪ್ರಿಯಾಂಕಾ ಶರ್ಮಾ ಬಂದೂಕು ಹಿಡಿದು ವಿಡಿಯೋ ಮಾಡಿ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಬಹಳ ವೈರಲ್ ಆಗಿತ್ತು. ಕೊನೆಗೆ ಆ ಕಾನ್‌ಸ್ಟೇಬಲ್ ಅನ್ನು ಕೆಲಸದಿಂದ ಅಮಾನತು ಮಾಡಲಾಯ್ತು. ಸರ್ವೀಸ್ ಪಿಸ್ತೂಲು ಹಿಡಿದುಕೊಂಡು, ‘ಉತ್ತರ ಪ್ರದೇಶದಲ್ಲಿ ಐದು ವರ್ಷದ ಹುಡುಗರು ಸಹ ಪಿಸ್ತೂಲು ಚಲಾಯಿಸುತ್ತಾರೆ” ಎಂದು ಸ್ಟೈಲ್ ಆಗಿ ವಿಡಿಯೋ ಒಂದನ್ನು ಮಾಡಿದ್ದರು. ಇದು ಉತ್ತರ ಪ್ರದೇಶ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿ ಪ್ರಿಯಾಂಕಾ ಮಿಶ್ರಾರನ್ನು ಅಮಾನತು ಮಾಡಲಾಯ್ತು.
ಇದರಿಂದ ಬೇಸರಗೊಂಡ ಪ್ರಿಯಾಂಕಾ ಮಿಶ್ರಾ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಇನ್‌ಸ್ಟಾಗ್ರಾಂ ವಿಡಿಯೋಗಳಿಂದ ಖ್ಯಾತರಾದ ಪ್ರಿಯಾಂಕಾ ಮಿಶ್ರಾಗೆ ಈಗ ವೆಬ್ ಸರಣಿ ಮತ್ತು ಮಾಡೆಲಿಂಗ್‌ನ ಅವಕಾಶಗಳು ಅರಸಿ ಬಂದಿವೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಣಯವನ್ನು ಪ್ರಿಯಾಂಕಾ ಮಿಶ್ರಾ ತೆಗೆದುಕೊಂಡಿಲ್ಲ.
ಅವಕಾಶಗಳ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಮಿಶ್ರಾ, “ಕೆಲಸಕ್ಕೆ ರಾಜೀನಾಮೆ ಕೊಟ್ಟ ಬಳಿಕ ವೆಬ್ ಸರಣಿ ಹಾಗೂ ಮಾಡೆಲಿಂಗ್‌ನ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಜೀವನದಲ್ಲಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚೆನ್ನಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ವೆಬ್ ಸರಣಿಯಲ್ಲಿ ನಟಿಸುವುದಕ್ಕೆ ಈಗಿನ್ನೂ ಒಪ್ಪಿಗೆ ಕೊಟ್ಟಿಲ್ಲ” ಎಂದಿದ್ದಾರೆ.
Laxmi News 24×7