Breaking News

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಪೋಸ್ಟರ್ ಆನ್ ಲೈನಲ್ಲಿ ಲೀಕ್

Spread the love

ಬೆಂಗಳೂರು: ಈ ಹಿಂದೆ ಸಂದರ್ಶನದಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರು ಶೀಘ್ರದಲ್ಲಿ ತಮ್ಮ ನಿರ್ದೇಶನದ ಸಿನಿಮಾ ಬಗ್ಗೆ ಘೋಷಿಸುವುದಾಗಿ ಹೇಳಿದ್ದರು. ಉಪೇಂದ್ರ ಅವರು ತಮ್ಮ ಜನ್ಮದಿನವಾದ ಸೆ.18ರಂದು ತಮ್ಮ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರವನ್ನು ಘೋಷಣೆ ಮಾಡಲಿದ್ದಾರೆ ಎಂದೇ ಹೇಳಲಾಗಿತ್ತು.

 

ಅಷ್ಟರೊಳಗೆ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಪೋಸ್ಟರ್ ಆನ್ ಲೈನಿನಲ್ಲಿ ಲೀಕ್ ಆಗಿರುವ ಸುದ್ದಿ ಹೊರಬಿದ್ದಿದೆ. ಇದೀಗ ಈ ಪೋಸ್ಟರ್ ವೈರಲ್ ಆಗಿದ್ದು ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ.

 

ವಿಭಿನ್ನ, ವಿಕ್ಷಿಪ್ತ ಸ್ಕ್ರಿಪ್ಟ್ ಹೆಣೆಯುವುದಕ್ಕೆ ಹೆ‍ಸರಾದ ಉಪೇಂದ್ರ ಅವರ ಹೊಸ ಪೋಸ್ಟರ್ ನಲ್ಲಿ ದೊಡ್ಡ ನಾಮದ ಚಿತ್ರವಿದೆ. ಅಲ್ಲದೆ ಕಥೆ- ಚಿತ್ರಕತೆ- ಸಂಭಾಷಣೆ- ನಿರ್ದೇಶನ ಉಪೇಂದ್ರ ಎಂದು ಬರೆಯಲಾಗಿದೆ.

 

ಈ ಸಿನಿಮಾ ಹಲವು ಭಾಷೆಗಳಲ್ಲಿ ಮೂಡಿ ಬರಲಿದೆ. ಉಪೇಂದ್ರ ಅವರ ಪ್ರೊಡಕ್ಷನ್ ನಲ್ಲೇ ತಯಾರಾಗುತ್ತಿರುವ ಈ ಸಿನಿಮಾ ಕನ್ನಡ, ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಕಾಣಲಿದೆ ಎನ್ನಲಾಗಿದೆ. ಉಪೇಂದ್ರ ಅಭಿನಯದ ಕಬ್ಜಾ ಚಿತ್ರದ ಚಿತ್ರೀಕರನ ಬಾಕಿಯಿದ್ದು, ಸೆ.೨೧ರಿಂದ ಮುಂದುವರಿಯಲಿದೆ


Spread the love

About Laxminews 24x7

Check Also

ಯಾವುದೇ ದೂರದೃಷ್ಟಿ ಇಲ್ಲದ ನೀರಸ ಆಯವ್ಯಯ ಪತ್ರ ಇದು- ಬಿವೈವಿ

Spread the love ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಮೂಲಕ ರಾಜ್ಯದ ಜನತೆಗೆ ನಿರಾಶೆ ಉಂಟು ಮಾಡಿದ್ದಾರೆ. ಯಾವುದೇ ದೂರದೃಷ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ