ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಬಿಎಸ್ ಯಡಿಯೂರಪ್ಪನವರನ್ನೇ ಕೆಳಗಿಳಿಸಲಾಯಿತು. ಹೀಗಿರುವಾಗ ನಿಮ್ಮ ಕಾಲೆಳೆಯುವವರೂ ಇದ್ದಾರೆ ಹುಶಾರ್. ಬೊಮ್ಮಾಯಿ ಪುತ್ರ ಬಸವರಾಜ ಬೊಮ್ಮಾಯಿ ಸರ್ಕಾರದ ಉಳಿದ ಅವಧಿ ಪೂರೈಸಲಿ ಎಂಬುದು ನನ್ನ ಆಶಯವೆಂದು ಸಿದ್ದರಾಮಯ್ಯ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನನ್ನ ಪರವಾರಿಗೆ ಶಾಸಕರು ಹಾಗೂ ಇನ್ನಿತರರಿದ್ದಾರೆ. ಆದರೆ ತಮ್ಮನ್ನು ದೆಹಲಿಗೆ ಕಳುಹಿಸಲು ಹುನ್ನಾರ ನಡೆದಿದೆ. ಅದು ತಮಗೂ ತಿಳಿದಿದೆ. ಹೀಗಾಗಿ ಹುಶಾರಾಗಿರಿ. ನೀವು ವಿಧಾನಸಭೆಯಲ್ಲಿ ಇರುವುದು ನಿಮ್ಮಲ್ಲೇ ಕೆಲವರಿಗೆ ಇಷ್ಟವಿಲ್ಲ. ಈ ವಿಷಯವನ್ನು ನೀವು ಸಭೆಯಲ್ಲಿ ಒಪ್ಪುವುದಿಲ್ಲವಾದರೂ, ಖಾಸಗಿಯಾಗಿ ಖಂಡಿತ ಒಪ್ಪುತ್ತೀರಿ ಎಂದರು.
Laxmi News 24×7