ಬೆಳಗಾವಿ – ಜಿಎಸ್ ಟಿ ದಾಖಲೆಗಳಿಲ್ಲದೆ 7 ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 7 ಕೋಟಿ ರೂ. ಮೌಲ್ಯದ ಅಡಿಕೆಗಳನ್ನು ಬೆಳಗಾವಿ ಸೆಂಟ್ರಲ್ ಜಿಎಸ್ಟಿ ಮತ್ತು ಸೆಂಟ್ರಲ್ ಎಕ್ಸೈಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನಿಂದ ಬಂದ ಮಾಹಿತಿ ಮೇರೆಗೆ ಹುಬ್ಬಳ್ಳಿ – ನವಲಗುಂದ ರಸ್ತೆಯಲ್ಲಿ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದಿಂದ ದೆಹಲಿ, ಅಹಮದಾಬಾದ್ ಗಳಿಗೆ ಅಡಿಕೆ ಸಾಗಿಸಲಾಗುತ್ತಿತ್ತು. ಅಡಿಕೆಗೆ ಶೇ. 5ರಷ್ಟು ಜಿಎಸ್ಟಿ ಕಟ್ಟಬೇಕಿತ್ತು. ಆದರೆ ಜಿಎಸ್ಟಿ ಕಟ್ಟಿರುವ ಯಾವುದೇ ದಾಖಲೆ ಇಲ್ಲದ ಕಾರಣ ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಜಿಎಸ್ಟಿ ಅಸಿಸ್ಟಂಟ್ ಕಮಿಶನರ್ ಅಜಿಂಕ್ಯ ಕಾಟ್ಕರ್ ತಿಳಿಸಿದ್ದಾರೆ.
Laxmi News 24×7