Breaking News

700 ಅಡಿಕೆ ಮರಗಳನ್ನು ಕಡಿದು ಹಾಕಿದ್ದ ಆರೋಪಿಯನ್ನ 5 ಗಂಟೆಗಳಲ್ಲಿ ಬಂಧಿಸಿದ ಪೊಲೀಸ್

Spread the love

ಹಾವೇರಿ: ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಬರೋಬ್ಬರಿ 700 ಅಡಿಕೆ ಮರಗಳನ್ನು ಕತ್ತರಿಸಿದ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಐದು ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರೈತ ಸಹೋದರರ ಮನೆಯಲ್ಲಿ ಬಾಡಿಗೆ ಇದ್ದವನೇ ಗಿಡಗಳನ್ನು ಕಡಿದಿರುವ ಆರೋಪಿ ಎನ್ನಲಾಗಿದೆ. ರಾಜಾಸಬ ಹೊಸಮನಿ ಎಂಬಾತನನ್ನು ಬಂಧಿಸಲಾಗಿದ್ದು ಈತ ತೋಟದಲ್ಲಿ ಬಂದ ಫಸಲಲ್ಲಿ ಶೇರ್ ಕೊಡುವಂತೆ ಕೇಳಿದ್ದನಂತೆ. ಈ ವಿಚಾರಕ್ಕೆ ರೈತರು ಹಾಗೂ ಆರೋಪಿ ನಡುವೆ ಜಗಳವಾಗಿತ್ತು.. ಈ ಹಿನ್ನಲೆ ರಾಜಾಸಾಬ ಹೊಸಮನಿಯನ್ನ ಮನೆ ಖಾಲಿ ಮಾಡಿಸಿ ರೈತ ಕಲೀಲ್ ಹಾಗೂ ಮೊಹಮ್ಮದ ರಫೀಕ್.. ಹೊರಗೆ ಹಾಕಿದ್ದರು ಎನ್ನಲಾಗಿದೆ.

ಅವಮಾನ ಮಾಡಿದ್ದಕ್ಕೆ ಕೆಲಸ ಮಾಡಿದ ದುಡ್ಡು ಕೊಡದಿದ್ದಕ್ಕೆ ಈ ಕೃತ್ಯ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನಂತೆ. ಚೂಪಾದ ಮಚ್ಚು ಹಿಡಿದು ರಾಜಾಸಾಬ ಹೊಸಮನಿ ನಿನ್ನೆ ರಾತ್ರಿ ಮರಗಳನ್ನು ಕತ್ತರಿಸಿ ಹಾಕಿದ್ದಾನೆ ಎನ್ನಲಾಗಿದೆ. ಆಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ