ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಹಲವು ದೇವಾಲಯಗಳ ನೆಲಸಮಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುಪ್ರೀಂಕೋರ್ಟ್ ನ ನಿಯಮದಂತೆ ಜಿಲ್ಲಾಡಳಿತ ಮೈಸೂರಿನಲ್ಲಿರುವ ಸುಮಾರು 93 ದೇವಾಲಯಗಳನ್ನು ತೆರವು ಮಾಡಲು ಪಾಲಿಕೆ ಪಟ್ಟಿ ಮಾಡಿದೆ.
ಹಿಂದೂ ದೇವಾಲಯಗಳನ್ನೇ ‘ಟಾರ್ಗೆಟ್’ ಮಾಡುತ್ತಿರುವುದು ಏಕೆ..? : ಮೈಸೂರು ಜಿಲ್ಲಾಡಳಿತದ ವಿರುದ್ಧ ಪ್ರತಾಪ್ ಸಿಂಹ ಸಿಡಿಮಿಡಿ
ಸುಪ್ರೀಂಕೋರ್ಟ್ ನ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ನಿಯಮದ ಅನ್ವಯ ಮೈಸೂರು ಜಿಲ್ಲಾಡಳಿತದ ಲಿಸ್ಟ್ ನಲ್ಲಿ ಈ ದೇವಾಲಯಗಳಿವೆ. ಅಗ್ರಹಾರದ 101 ಗಣಪತಿ ದೇವಸ್ಥಾನ, ಚಾಮುಂಡೇಶ್ವರಿ ದೇವಾಲಯ, ವಿದ್ಯಾರಣ್ಯ ಪುರಂನ ರಾಮಲಿಂಗೇಶ್ವರ ದೇವಾಲಯ, ಇಟ್ಟಿಗೆ ಗೂಡಿನ ದುರ್ಗಾಪರಮೇಶ್ವರಿ ದೇವಸ್ಥಾನ, ನ್ಯೂ ಸಯ್ಯಾಜಿರಾವ್ ರಸ್ತೆ ಪಂಚಮುಖಿ ಗಣಪತಿ, ವಿಜಯನಗರದ ಚಾಮುಂಡೇಶ್ವರಿ, ಶಾರದಾದೇವಿ ನಗರದ ಪಾರ್ಕ್ ನಲ್ಲಿರುವ ಪಂಚಮುಖಿ ಗಣೇಶ, ವಿವಿ ಮಾರ್ಕೇಟ್ ನಲ್ಲಿರುವ ನವಗ್ರಹ ದೇವಸ್ಥಾನ ಸೇರಿದಂತೆ ಒಟ್ಟು 93 ದೇವಸ್ಥಾನಗಳ ತೆರವಿಗೆ ಪಾಲಿಕೆ ಸಜ್ಜಾಗಿದೆ.
ಅಧಿಕೃತವಾಗಿ ನಿರ್ಮಾಣಗೊಂಡ ದೇವಾಲಯಗಳ ತೆರವಿಗೆ ಪಾಲಿಕೆ ಇಂದು ಸಜ್ಜಾಗುತ್ತಿದ್ದಂತೆ ಸಾರ್ವಜನಿಕರು ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರಿಂದ ಭಾರಿ ವಿರೋಧ ವ್ಯಕ್ತವಾಗಿದೆ…..