ಬೆಂಗಳೂರು: ಇತ್ತೀಚೆಗಿನ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ನಾಲ್ವರು ಜೆಡಿಎಸ್ ಕಾರ್ಪೊರೇಟರ್ಗಳು ಆಪರೇಷನ್ ಕಮಲದ ಭೀತಿಯಿಂದ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಯಾರಿಗೆ ಬೆಂಬಲ ನೀಡಬೇಕು ಎಂದು ಸೆಪ್ಟೆಂಬರ್ 7ನೇ ತಾರೀಕಿನಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದ ಪಾಲಿಕೆ ಸದದ್ಯರು ಇನ್ನೂ ನಗರದ ಈಗಲ್ ಟನ್ ರೆಸಾರ್ಟ್ನಲ್ಲೇ ಉಳಿದುಕೊಂಡಿದ್ದಾರೆ.

ಕಳೆದ ನಾಲ್ಕ ದಿನಗಳಿಂದ ಈಗಲ್ ಟನ್ ರೆಸಾರ್ಟ್ನಲ್ಲೇ ಉಳಿದುಕೊಂಡಿರುವ ಜೆಡಿಎಸ್ ಕಾರ್ಪೊರೇಟರ್ಗಳು ಈಗ ಕಿಂಗ್ ಮೇಕರ್ಸ್. ಕಲಬುರಗಿ ಪಾಲಿಕೆಯಲ್ಲಿ ಯಾರೇ ಗದ್ದುಗೆ ಹಿಡಿಯಬೇಕು ಎಂದರೂ ಇವರ ಬೆಂಬಲ ಅನಿವಾರ್ಯ. ನಮಗೆ ಮೇಯರ್ ಸ್ಥಾನ ನೀಡಿದರೆ ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲ ನೀಡ್ತೀವಿ ಎಂದಿದ್ದರು.
ಇನ್ನು, ಇತ್ತ ಬಿಜೆಪಿಯೂ ನಿಮ್ಮನ್ನು ಮೇಯರ್ ಮಾಡ್ತೀವಿ ಎಂದು ಆಫರ್ ನೀಡಿದೆ. ಎಲ್ಲಿ ನಮ್ಮನ್ನು ಆಪರೇಷನ್ ಕಮಲ ಮಾಡುತ್ತಾರೋ ಎಂಬ ಭೀತಿಯಿಂದ ಜೆಡಿಎಸ್ ಕಾರ್ಪೋರೇಟರ್ಗಳು ಕಲಬುರಗಿಯತ್ತ ಮುಖ ಮಾಡದೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ.
Laxmi News 24×7