Breaking News

ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ ಗಳು

Spread the love

ಹಾಸನ: ಅರಸೀಕೆರೆಯ ಮಾಡಾಳು ಗೌರಮ್ಮ ಪುಣ್ಯ ಕ್ಷೇತ್ರದಲ್ಲಿ ರಾಜ್ಯ ಬಿಜೆಪಿ ಬಗ್ಗೆ ಗುರುವಾರ ಕೋಡಿ ಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಭಾರತ ಸಾಧು ಸಂತರ ಪೂಜೆ, ಜಪತಪ, ದೇವರನ್ನು ನಂಬಿರೋ ದೇಶ. ಪ್ರವಾಹ, ಕರೊನಾದಂತಹ ಕೆಟ್ಟ ಕಾಲದಲ್ಲಿ ಯಡಿಯೂರಪ್ಪ ಅವರನ್ನು ಕೆಳಗಿಳಿಸೋದು ಬೇಡ ಅಂತ ಸಲಹೆ ಕೊಡಲು ಸ್ವಾಮೀಜಿಗಳು ಬಂದಿದ್ದರು. ಆದ್ರೆ ಅವರ ಮಾತುಗಳನ್ನೇ ಧಿಕ್ಕರಿಸಿದರು. ಸದ್ಯದಲ್ಲೇ ಅದರ ಫಲವನ್ನ ಇವರೆಲ್ಲ ಉಣ್ಣುತ್ತಾರೆ ನೋಡಿ. ಹೇಗೆ ಅಂತ ಈಗ ಹೇಳಲ್ಲ, ಎಲ್ಲ ಕಾದು ನೋಡಿ ಎಂದು ಕೋಡಿಶ್ರೀಗಳು ಹೇಳಿದರು.

ಸೂತ್ರಧಾರಿ ಇದ್ದಾರೆ, ಬೊಮ್ಮಾಯಿ ಗೊಂಬೆ ಆಗಿದ್ದಾರೆ. ಯಡಿಯೂರಪ್ಪ ಆಡಿಸ್ತಾರೆ, ಬೊಂಬಾಯಿ ಕುಣಿಯುತ್ತೆ. ಅದರ ಹಿಂದೆ ಸೂತ್ರಧಾರಿ ಯಡಿಯೂರಪ್ಪ ಇದ್ದಾರಲ್ಲ ಏನೂ ತೊಂದರೆ ಇಲ್ಲ ಎಂದರು.

ರಾಜ್ಯದಲ್ಲಿ ಮಳೆಯಾಗುವ ಲಕ್ಷಣ ಇದೆ. ಇನ್ನೂ ಆಪತ್ತುಗಳಿದ್ದಾವೆ. ಭೂಮಿ ನಡುಗುವುದು, ರಾಜಭಯ ಎಲ್ಲವೂ ಕಾರ್ತೀಕದವರೆಗೆ ಇರಲಿದೆ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದರು.


Spread the love

About Laxminews 24x7

Check Also

ಇನ್ಮುಂದೆ ನಾವೆಲ್ಲರು ಜೆಡಿಎಸ್​ ಪರ ಕೆಲಸ ಮಾಡ್ಬೇಕು: ಕಾರ್ಯಕರ್ತರಿಂದ ಪ್ರತಿಜ್ಞೆ ಮಾಡಿಸಿದ ಎ. ಮಂಜು

Spread the love ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅರಕಲಗೂಡು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಾಜಿ ಸಚಿವ ಎ. ಮಂಜು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ