Breaking News

ಮೈಸೂರಲ್ಲಿ ಗ್ಯಾಂಗ್​ ರೇಪ್​: ನಮ್ಮಲ್ಲೊಬ್ಬನಿಗೆ ಲೈಂಗಿಕ ಚಟವಿತ್ತು. ಬೆಚ್ಚಿಬೀಳಿಸುತ್ತೆ ಆರೋಪಿಗಳ ಮಾತು

Spread the love

ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಎರಡು ವರ್ಷದಿಂದಲೂ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯುವ ಜೋಡಿಗಳನ್ನು ಪೀಡಿಸಿದ್ದು ಮಾತ್ರವಲ್ಲ, ಅವರ ಬಳಿ ಸಿಕ್ಕಿದ್ದನ್ನೆಲ್ಲ ದೋಚುತ್ತಿದ್ದಾರೆ. ಬಂಧಿತ ಐವರು ಆರೋಪಿಗಳಲ್ಲಿ ಒಬ್ಬನಿಗೆ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಚಟವಿತ್ತು. ಒಬ್ಬ ಮಹಿಳೆಯರ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರೆ, ಇನ್ನುಳಿದವರು ಚಿನ್ನಾಭರಣ ಮತ್ತು ಹಣಕ್ಕೆ ಆಸೆ ಬೀಳುತ್ತಿದ್ದರು ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ.

ಕೃತ್ಯ ಎಸಗಿರುವುದಾಗಿ ಆರೋಪಿಗಳೆಲ್ಲರೂ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ವಯಸ್ಸಿನ ವ್ಯತ್ಯಾಸವನ್ನೇ ನೋಡದೆ ಮಹಿಳೆಯರು-ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾರೆ. ಈ ರೀತಿಯ ಪ್ರಕರಣಗಳಲ್ಲಿ ಮರ್ಯಾದೆಗೆ ಅಂಜಿ ಸಂತ್ರಸ್ತರು ಪೊಲೀಸರಿಗೆ ದೂರು ನೀಡಲ್ಲ. ಇದನ್ನೇ ಆರೋಪಿಗಳು ಅವಕಾಶವನ್ನಾಗಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು.

ಆಗಿಂದಾಗ್ಗೆ ಮೈಸೂರು ನಗರಕ್ಕೆ ಬಂದು ದೌರ್ಜನ್ಯ, ದರೋಡೆ ಎಸಗಿದ್ದರು. ಪ್ರತಿ ಸಲ ಅಂಥ ಕೃತ್ಯ ನಡೆಸಿದ ನಂತರ ಕೆಲ ವಾರಗಳವರೆಗೆ ಮೈಸೂರಿಗೆ ಮತ್ತೆ ಬರುತ್ತಿರಲಿಲ್ಲ. ಅಂತೆಯೇ ಆ ಗ್ಯಾಂಗ್​ ಆ.25ರಂದು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಸುತ್ತಾಟ ನಡೆಸಿ ಮದ್ಯ ಕುಡಿದು ಕುಳಿತಿತ್ತು. ಆ ವೇಳೆ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಬರುತ್ತಿರುವುದನ್ನು ಕಂಡು ದೌರ್ಜನ್ಯ ಎಸಗಿದ್ದರು. ಹಣ ಸಿಗದಿದ್ದಾಗ ಯುವತಿ ಮೇಲೆ ಒಟ್ಟು 7 ಜನ ಸೇರಿಕೊಂಡು ಅತ್ಯಾಚಾರ ಮಾಡಿ ಪರಾರಿಯಾಗಿದ್ದಾಗಿ ಆರೋಪಿಯೊಬ್ಬ ಮಾಹಿತಿ ನೀಡಿದ್ದಾನೆ. ಆದರೆ, ಪ್ರಕರಣದಲ್ಲಿ ಹಲ್ಲೆಗೆ ಒಳಗಾಗಿದ್ದ ಸಂತ್ರಸ್ತೆಯ ಸ್ನೇಹಿತ 6 ಜನರೆಂದು ಹೇಳಿರುವುದರಿಂದ ಆರೋಪಿ ಹೇಳಿಕೆ ಅನುಮಾನಕ್ಕೆ ಎಡೆಮಾಡಿದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ