Breaking News

ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ

Spread the love

ಒಂದುವರ್ಷದಿಂದ ಇವರು ಬಾಯಿ ಮುಚ್ಚಿಕೊಂಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಸುರೇಶ್ ಅಂಗಡಿ ಅವರ ಅಮಾನವೀಯ ಅಂತ್ಯಸಂಸ್ಕಾರ ಮಾಡಿತು ಎಂಬ ಡಿಕೆಶಿ ಆರೋಪ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸನ್ಮಾನ್ಯ ಸುರೇಶ ಅಂಗಡಿ ಕೊರೊನಾದಿಂದ ಮೃತಪಟ್ಟು ಒಂದು ವರ್ಷವಾಯಿತು. ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು. ಇವರು ಡಿ.ಕೆ ಶಿವಕುಮಾರ್ ಇರಲಿ, ಬೇಕಾದಾಂವ ಇರಲಿ ಎಂದು ಏಕವಚನದಲ್ಲೇ ಡಿಕೆಶಿ ವಿರುದ್ಧ ವಾಗ್ದಾಳಿ ಮಾಡಿದರು

ದಿ.ಸುರೇಶ್ ಅಂಗಡಿ ಸ್ಥಳೀಯ ಸಂಸದರಾಗಿದ್ದವರು, ನಮ್ಮ ಹಿರಿಯ ನಾಯಕರಾಗಿದ್ದರು. ಅವರ ಬಗ್ಗೆ ನಮಗೆ ಎಷ್ಟು ಗೌರವ ಇದೆ. ಇವರಿಗೆ ಎಷ್ಟು ಗೌರವ ಇದೆ ಎಂಬುದು ನಮಗೆ ಗೊತ್ತಿದೆ. ನಾಲ್ಕು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರು. ಅವರು ಮೃತಪಟ್ಟಾಗ ಕೋವಿಡ್ ಮಾರ್ಗದರ್ಶನ ಏನಿತ್ತು ಇವರಿಗೆ ಗೊತ್ತಿಲ್ಲ. ಎಷ್ಟು ಕೊರೊನಾದಲ್ಲಿ ಮುಳುಗಿದ್ದರು ಎಂಬುದು ಈ ಮೂಲಕ ತಿಳಿಯುತ್ತೆ. ಡಿ.ಕೆ.ಶಿವಕುಮಾರ್ ಮನೆಯಲ್ಲಿ ಮಲಕೊಂಡಿದ್ರು, ಅದಕ್ಕೆ ಇವರಿಗೆ ಗೊತ್ತಿಲ್ಲ ಎಂದು ಟೀಕಿಸಿದರು.

ಎಲ್ಲೇ ಮೃತಪಟ್ಟರೂ ಯಾರ ಸಂಬಂಧಿಕರ ಕೈಯಲ್ಲಿ ಮೃತದೇಹ ಕೊಡಬಾರದೆಂಬ ನಿಯಮವಿತ್ತು. ಆಗ ನಾವು ಮೃತದೇಹ ಕುಟುಂಬಕ್ಕೆ ಹಸ್ತಾಂತರಿಸಿದ್ದರೆ ಇವರೇ ಉಲ್ಟಾ ಮಾತನಾಡ್ತಿದ್ರು. ಕೊರೊನಾ ಸಮಯದಲ್ಲಿ ಏನು ಮಾರ್ಗದರ್ಶನ ಇತ್ತು ಎಂಬುದು ಇವರಿಗೆ ಗೊತ್ತಿಲ್ಲ. ಕೋವಿಡ್ ವೇಳೆ ಇವರು ಮನೆ ಬಿಟ್ಟು ಹೊರಬಂದಿಲ್ಲ, ಇವರಿಗೆ ಏನೂ ಗೊತ್ತಿಲ್ಲ. ವ್ಯಾಕ್ಸಿನ್ ತಗೊಬೇಡಿ ಎಂದು ಹೇಳಿ ನೀವು ಕದ್ದುಮುಚ್ಚಿ ವ್ಯಾಕ್ಸಿನ್ ತಗೊಂಡ್ರಿ. ಒಂದ ವರ್ಷ ಏಕೆ ಸುಮ್ನಿದ್ರಿ, ಎಲೆಕ್ಷನ್ ಬಂದಾಗ ಮಾತನಾಡ್ತೀರಿ. ಕಾಂಗ್ರೆಸ್ ಬಿ ಫಾರಂ ತುಂಬಲು ವ್ಯಕ್ತಿಗಳಿಲ್ಲ, ಅವರನ್ನು ಹುಡುಕ್ರಿ ಮೊದಲು. ಎಲೆಕ್ಷನ್ ಮುಗಿಯಲು ಬಂತು ಇಲ್ಲಿ ಈಗ ಬಂದು ಏನು ಮಾಡ್ತಾರೆ? ಎಂದು ವ್ಯಂಗ್ಯವಾಗಿ ಮಾತನಾಡಿದರು.

ಡಿಕೆಶಿಗೆ ಸವಾಲು
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಆದಾಗ ಎರಡು ವರ್ಷ ನೀವು ಏಕೆ ಕೆಲಸ ಮಾಡಲಿಲ್ಲ? ನಾವು ಶಾಸಕರಾಗಿ ಆಯ್ಕೆಯಾದ ಮೇಲೆ ಕೆಲಸ ಶುರು ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಎರಡು ವರ್ಷ ಕೆಲಸ ಶುರು ಮಾಡದೆ ಸುಮ್ನಿದ್ರು. ಬೆಳಗಾವಿ ಸ್ಮಾರ್ಟ್ ಸಿಟಿ ಬಗ್ಗೆ ಚರ್ಚೆಗೆ ಬೇಕಾದವರು ಬರಲಿ. ಕಾಂಗ್ರೆಸ್ ಶಾಸಕರು ಬರಲಿ, ಸಂಸದರು ಬರಲಿ ಯಾರಬೇಕಾದ್ರು ಚರ್ಚೆಗೆ ಬರಲಿ ಎಂದು ಓಪನ್ ಆಗಿ ಡಿಕೆಶಿಗೆ ಚಾಲೆಂಜ್ ಮಾಡಿದರು


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ