Breaking News

ಮತ ಕೇಳಲು ಯಾವ ಪಕ್ಷದ ಅಭ್ಯರ್ಥಿಯೂ ತಮ್ಮ ಗಲ್ಲಿಯಲ್ಲಿ ಬರುವಂತಿಲ್ಲ ವಾರ್ಡ್ ನಂ. 54ರ ರಹವಾಸಿಗಳ ಚುನಾವಣೆ ಬಹಿಷ್ಕರಿಸಿ, ಆಕ್ರೋಶ

Spread the love

ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ ನಂ. 54ರ ರಹವಾಸಿಗಳು ಚುನಾವಣೆ ಬಹಿಷ್ಕರಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 1995 ರಿಂದ ಇಲ್ಲಿನ ಚನ್ನಮ್ಮ ನಗರದ ಸ್ವಾಮಿನಾಥ್ ಕಾಲನಿ ಮತ್ತು ಸುತ್ತಲ ಪ್ರದೇಶಗಳಿಗೆ ಮಹಾನಗರ ಪಾಲಿಕೆ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂಬುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.1995ರಿಂದಲೂ ಮಹಾನಗರ ಪಾಲಿಕೆಗೆ ನಿಯಮಿತವಾಗಿ ತೆರಿಗೆ ಕಟ್ಟುತ್ತ ಬರಲಾಗುತ್ತಿದೆ.

ಹೀಗಿದ್ದಾಗೂ ನೀರು, ವಿದ್ಯುತ್, ರಸ್ತೆ, ಒಳಚರಂಡಿ ಸೇರಿದಂತೆ ಯಾವ ಸೌಲಭ್ಯವನ್ನು ನೀಡಲು ಪಾಲಿಕೆ ಮುಂದಾಗಿಲ್ಲ ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ. ಇಂದು ಸಂಜೆ ಸಭೆ ನಡೆಸಿದ ನಾಗರಿಕರು ಮತ ಕೇಳಲು ಯಾವ ಪಕ್ಷದ ಅಭ್ಯರ್ಥಿಯೂ ತಮ್ಮ ಗಲ್ಲಿಯಲ್ಲಿ ಬರುವಂತಿಲ್ಲ ಎಂದು ಎಚ್ಚರಿಸಿರುವ ನಾಗರಿಕರು. ನಾಮಫಲಕವನ್ನು ಅಳವಡಿಸುವ ಮೂಲಕ ಮತದಾನವನ್ನು ಬಹಿಷ್ಕರಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ

Spread the loveಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೋಡಬೇಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ