ಬೆಂಗಳೂರು: ಈ ಸರ್ಕಾರದಲ್ಲಿ ಹೆಣ್ಮಕ್ಕಳಾಗಲೀ, ಗಂಡು ಮಕ್ಕಳಾಗಲೀ ಸೇಫ್ ಅಲ್ಲ. ಇದಕ್ಕೆ ಮೈಸೂರು ಪ್ರಕರಣವೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ಗ್ಯಾಂಗ್ ರೇಪ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿ ನೋಡಿ ಪಾಪ ಗೃಹ ಸಚಿವರು ಹೊಸದಾಗಿ ಮಂತ್ರಿಯಾಗಿದ್ದಾರೆ. ಅವರ ಮೇಲೇನೆ ಮಾತನಾಡುವಂಥದ್ದಲ್ಲ. ಒಂದು ಸರ್ಕಾರ ಕಾರಣವಾಗುತ್ತದೆ. ಓರ್ವ ಗೃಹ ಸಚಿವ ಮಾತ್ರ ಅಲ್ಲ ಎಂದಿದ್ದಾರೆ.ನಾನು ಅವರ ಬಗ್ಗೆ ಕಾಮೆಂಟ್ ಮಾಡಲ್ಲ. ಆದ್ರೆ ಇದಕ್ಕೆ ಉತ್ತರ ಕೊಡಬೇಕಾಗಿರೋದು ಮುಖ್ಯಮಂತ್ರಿಗಳು. ಅವರ ಒಬ್ಬರದ್ದು ಏನಿದೆ, ಇಡೀ ಆಡಳಿತದ ಜವಾಬ್ದಾರಿ ಎಂದು ಗೃಹ ಸಚಿವರ ಮೇಲೆ ಸಾಫ್ಟ್ ಕಾರ್ನರ್ ತೋರಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Laxmi News 24×7