Breaking News

ನರೇಗಾದಲ್ಲಿ ಜೆಸಿಬಿ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ರೈತನಿಗೆ ಥಳಿತ; ನೊಂದು ಅನ್ನದಾತ ಆತ್ಮಹತ್ಯೆ

Spread the love

ಹಾವೇರಿ: ನರೇಗಾ ಕಾಮಾಗಾರಿ ವೇಳೆ ಜೆಸಿಬಿ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ರೈತನನ್ನು ಏಜೆಂಟರು ಥಳಿಸಿದ ಪರಿಣಾಮ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನೀರಲಗಿ ಗ್ರಾಮದಲ್ಲಿ ನಡೆದಿದೆ.

 

ಶಿವಪ್ಪ ಪುಟ್ಟಪ್ಪ ಈರಪ್ಪನವರ (60) ಆತ್ಮಹತ್ಯೆಗೆ ಶರಣಾದ ರೈತ. ನರೇಗಾ ಕಾಮಗಾರಿಯಲ್ಲಿ ಸರ್ಕಾರದ ನಿಯಮ ಮೀರಿ ಜೆಸಿಬಿ ಬಳಕೆಗೆ ಮೃತ ರೈತ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಇದಕ್ಕೆ ಕೋಪಗೊಂಡ ನರೇಗಾ ಕಾಮಗಾರಿಯ ಏಜೆಂಟರಾದ ಮಂಜಪ್ಪ ಹಳೆಮನಿ ಮತ್ತು ದ್ಯಾವನಗೌಡ ದೊಡ್ಡಗೌಡ್ರ ಮೃತ ರೈತನನ್ನು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.

ಹಲ್ಲೆ ಮಾಡಿದ್ದು ಅಲ್ಲದೇ ನಮ್ಮ ಸುದ್ದಿಗೆ ಬರಬೇಡ ಎಂದು ಬೆದರಿಕೆ ಕೂಡ ಹಾಕಿದ್ದರಂತೆ. ಇದೇ ವಿಚಾರವಾಗಿ ಏಜೆಂಟರ್​ಗಳು ಹಾಗೂ ರೈತನಿಂದ ಜಮೀನಿನಲ್ಲಿ ಜಗಳ ಕೂಡ ನಡೆದಿತ್ತು ಎನ್ನಲಾಗಿದೆ.

ಆರೋಪಿಗಳು ಎಸ್ಕೇಪ್​
ಈ ಹಿನ್ನೆಲೆ ಮನನೊಂದ ರೈತ ಹೊಡೆದವರ ಹೆಸರು ಹೇಳಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷ್ಯ ಎಂಬಂತೆ ಸಾಯುವ ಮುನ್ನ ಆರೋಪಿಗಳ ಹೆಸರು ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ. ಇನ್ನು ರೈತ ಸಾವನ್ನಪ್ಪುತ್ತಿದ್ದಂತೆ ಆರೋಪಿಗಳು ಊರು ಬಿಟ್ಟು ಪರಾರಿಯಾಗಿದ್ದಾರೆ. ಅನ್ಯಾಯವಾಗಿ ಮುಗ್ಧ ರೈತನ ಪ್ರಾಣ ತೆಗೆದವರಿಗೆ ಶಿಕ್ಷೆಯಾಗಲಿ ಎಂದು ಸಂಬಂಧಿಕರ ಆಗ್ರಹಪಡಿಸಿದ್ದು, ಗುತ್ತಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ