Breaking News

ರಾಜ್ಯ ಸರ್ಕಾರದಿಂದ ಮಹಿಳಾ ಮಣಿಗಳಿಗೆ ಭರ್ಜರಿ ಸಿಹಿ ಸುದ್ದಿ : ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Spread the love

ಬಳ್ಳಾರಿ : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2021-22ನೇ ಸಾಲಿನ ಉದ್ಯೋಗಿನಿ,ಕಿರುಸಾಲ,ಸಮೃದ್ಧಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಅರ್ಜಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು ಅಥವಾ ದೂ.ಸಂ:08392-2294127 ಮೊ.ಸಂ:9110653738 ಗೆ ಸಂಪರ್ಕಿಸಬಹುದು. ಸೆ.6ರೊಳಗಾಗಿ ಅರ್ಜಿ ಸಲ್ಲಿಸಬೇಕು.

 

ಉದ್ಯೋಗಿನಿ ಯೋಜನೆಯ ಮಾನದಂಡಗಳು: 18ರಿಂದ 55 ವರ್ಷದೊಳಗಿನ ಮಹಿಳೆಯರಾಗಿರಬೇಕು, ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು, ಕುಟುಂಬದ ವಾರ್ಷಿಕ ಆದಾಯವು 40 ಸಾವಿರ ಮೀರಬಾರದು, ವಿಧವೆಯರು, ಸಂಕಷ್ಟಕ್ಕೊಳಗಾದ ಮಹಿಳೆಯರು, ಅಂಗವಿಕಲ ಮಹಿಳೆಯರು ಹಾಗೂ ದೇವದಾಸಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು, ಸ್ವಯಂ ಉದ್ಯೋಗದಲ್ಲಿ ಸಾಕಷ್ಟು ಜ್ಞಾನ ಮತ್ತು ಅನುಭವ ಹೊಂದಿರಬೇಕು, ಯೋಜನಾ ವರದಿ ಕಡ್ಡಾಯವಾಗಿ ಲಗತ್ತಿಸಬೇಕು, ಆಯ್ಕೆಯಾದ ಫಲಾನುಭವಿಯು ಬ್ಯಾಂಕ್‍ನಿಂದ ಸಾಲ ಮಂಜೂರಾತಿ ಪತ್ರವನ್ನು ಪಡೆದರೆ ಮಾತ್ರ ಸಹಾಯಧನ ಬಿಡುಗಡೆ ಮಾಡಲಾಗುವುದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಹಾಗೂ ಘಟಕ ವೆಚ್ಚ ರೂ.3ಲಕ್ಷಕ್ಕೆ ಸಹಾಯಧನ ಶೇ.50ರಷ್ಟು(ರೂ.1.50ಲಕ್ಷ)ವರೆಗೆ ವಿಶೇಷ ವರ್ಗದ,ವಿಧವೆ,ಅಲ್ಪಸಂಖ್ಯಾತರು ಮತ್ತು ಇತರೆ ಮಹಿಳೆಯರಿಗೆ ಘಟಕ ವೆಚ್ಚ ರೂ.3ಲಕ್ಷಕ್ಕೆ ಶೇ.30 ರಷ್ಟು (90ಸಾವಿರ) ಸಹಾಯಧನ, ಬ್ಯಾಂಕ್ ಮಂಜೂರು ಮಾಡಿದ ಸಾಲದ ಮೊತ್ತಕ್ಕೆ ಅನುಗುಣವಾಗಿ ಸಹಾಯಧನ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

 

ಉದ್ಯೋಗಿನಿ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಗಳು: ವಯಸ್ಸಿನ ಪ್ರಮಾಣ ಪತ್ರ,ಆದಾಯ ಪ್ರಮಾಣ ಪತ್ರ,ಜಾತಿ ಪ್ರಮಾಣ ಪತ್ರ, ಕೈಗೊಳ್ಳುವ ಆದಾಯೋತ್ಪನ್ನ ಚಟುವಟಿಕೆಗಳ ಯೋಜನಾ ವರದಿ, ವಾಸಸ್ಥಳ ಪ್ರಮಾಣ ಪತ್ರ, ವೋಟರ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ (ಬ್ಯಾಂಕ್ ಪುಸ್ತಕದಲ್ಲಿ ಆಧಾರ್ ನಂಬರ್ ಮತ್ತು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನೊಂದಾಯಿಸಿರಬೇಕು) ಎಂದು ಅವರು ತಿಳಿಸಿದ್ದಾರೆ.

 

ಕಿರುಸಾಲ ಯೋಜನೆಯ ಮಾನದಂಡಗಳು: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು. ಸ್ತ್ರೀ ಶಕ್ತಿ ಗುಂಪುಗಳು ಬ್ಯಾಂಕ್ ಖಾತೆಯು ಚಾಲ್ತಿಯಲ್ಲಿರಬೇಕು, ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು, ಗುಂಪು ಬೇರೆ ಯಾವುದೇ ಆರ್ಥಿಕ ಸಂಸ್ಥೆ/ಬ್ಯಾಂಕ್‍ಗಳಲ್ಲಿ ಸಾಲಗಾರರಾಗಿರಬಾರದು, ಈಗಾಗಲೇ ಕಿರುಸಾಲ ಯೋಜನೆಯಡಿಯಲ್ಲಿ ಪ್ರಯೋಜನೆ ಪಡೆಯದೇ ಇರುವ ಸಂಘಗಳು ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತವೆ.ಇದೇ ಯೋಜನೆಯಡಿ ಸಾಲ ಪಡೆದಿದ್ದರೆ ಇವರು ಸಾಲ ಪಡೆದು 5 ವರ್ಷಗಳಾಗಿದ್ದರೆ ಮಾತ್ರ ಸಾಲ ಪಡೆಯಬಹುದಾಗಿರುತ್ತದೆ.ಸ್ತ್ರೀ ಶಕ್ತಿ ಸಂಘ ಆರ್ಥಿಕವಾಗಿ ಸದೃಢವಾಗಿದ್ದು, ಗುಂಪಿನ ಉಳಿತಾಯ ಗರಿಷ್ಠ 2ಲಕ್ಷ ರೂ.ಗಳ ಮೇಲಿರಬೇಕು, ಗುಂಪು ವ್ಯವಸ್ಥಿತ ರೀತಿಯಲ್ಲಿ ದಾಖಲೆಗಳನ್ನು ನಿರ್ವಹಿಸುತ್ತಿರಬೇಕು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಸುತ್ತುನಿಧಿ, ಪ್ರೋತ್ಸಾಹಧನ ಕೊಡುವಾಗ ಅನುಸರಿಸುವ ಮೌಲ್ಯಮಾಪನದ ಮಾರ್ಗಸೂಚಿಗಳನ್ನು ಬಳಸಿ ಮೌಲ್ಯಮಾಪನ ಮಾಡುವುದು, ಅದರಲ್ಲಿ ಎ ಶ್ರೇಣಿಯ ಗುಂಪುಗಳಿಗೆ ಪ್ರಥಮ ಆದ್ಯತೆ ಎ ಶ್ರೇಣಿಯ ಗುಂಪುಗಳು ಲಭ್ಯವಿರದಿದ್ದಲ್ಲಿ ಬಿ ಶ್ರೇಣಿಯ ಗುಂಪುಗಳನ್ನು ಪರಿಗಣಿಸಲಾಗುತ್ತದೆ. ಗುಂಪು ನಿಗಮದಿಂದ ಪಡೆಯುವ ಸಾಲವನ್ನು ಗುಂಪಿನಿಂದ ಉತ್ಪಾದನಾ ಘಟಕ/ಸಣ್ಣ ಉದ್ದಿಮೆಯನ್ನು ಸ್ಥಾಪಿಸಲು ಮಾತ್ರ ಬಳಸಿಕೊಳ್ಳತಕ್ಕದ್ದು, ಸಾಲದ ಅರ್ಜಿ ಹಾಕುವ ಸ್ತ್ರೀ ಶಕ್ತಿ ಗುಂಪು ತಾಲೂಕು ಮಟ್ಟದ ಒಕ್ಕೂಟದಲ್ಲಿ ನೊಂದಣಿಯಾಗಿ ಸದಸ್ಯತ್ವ ಹೊಂದಿರಬೇಕು.

 

ಕಿರುಸಾಲ ಯೋಜನೆಗೆ ಸಲ್ಲಿಸಬೇಕಾದ ದಾಖಲೆಗಳ ವಿವರ: ಅರ್ಜಿಯ ಜೊತೆಗೆ ಗ್ರೇಡಿಂಗ್ ಮಾಡಿದ ದಾಖಲೆಗಳನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಧೃಡೀಕರಿಸಿ ನೀಡುವುದು,ಸದಸ್ಯರೆಲ್ಲರೂ ಸಹಿ ಮಾಡಿರುವ 50 ರೂ.ಛಾಪಾ ಕಾಗದ, ಬ್ಯಾಂಕ್ ಖಾತೆಯ ನಕಲು ಪ್ರತಿ, ಸಾಲ ಪಡೆಯಲು ಉದ್ದೇಶಿಸಿದ ಉತ್ಪಾದನಾ ಘಟಕದ ಯೋಜನಾ ವರದಿ, ಬೇರೆ ಯಾವುದೇ ಆರ್ಥಿಕ ಸಂಸ್ಥೆ ಅಥವಾ ಬ್ಯಾಂಕ್‍ಗಳಿಂದ ಸಾಲ ಪಡೆದಿಲ್ಲ ಎಂಬ ಬಗ್ಗೆ ದೃಢೀಕರಣ,ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ದೃಢೀಕರಣ ಪ್ರತಿಯನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸಮೃದ್ಧಿ ಯೋಜನೆಯ ಮಾನದಂಡಗಳು: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು,18ರಿಂದ 60 ವರ್ಷದೊಳಗಿರಬೇಕು,ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ,ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಪೌರಾಡಳಿತ ಇಲಾಖೆಯಲ್ಲಿ ಮತ್ತು ಬೆಂಗಳೂರು ನಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಬೃಹತ್ ಮಹಾನಗರ ಪಾಲಿಕೆಯಲ್ಲಿ ಬೀದಿಬದಿ ವ್ಯಾಪಾರಿ ಎಂದು ನೊಂದಣಿ ಮಾಡಿಸಿರುವ ಗುರುತಿನ ಚೀಟಿ ಹೊಂದಿರಬೇಕು, ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅವರಿಂದ ಬೀದಿಬದಿ ವ್ಯಾಪಾರಿ ಎಂದು ದೃಢೀಕರಿಸಿ ದಾಖಲೆಗಳನ್ನು ಪಡೆದಿರಬೇಕು, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್‍ಗಳನ್ನು ಕಡ್ಡಾಯವಾಗಿ ಹೊಂದಿರಬೇಕು,ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಕಡ್ಡಾಯವಾಗಿ ಖಾತೆಯನ್ನು ಹೊಂದಿರಬೇಕು,ಒಬ್ಬ ಫಲಾನುಭವಿ ಕೇವಲ ಒಂದು ಬಾರಿ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ ಎಂದು ಅವರು ವಿವರಿಸಿದ್ದಾರೆ.

 

ಸಮೃದ್ಧಿ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಗಳ ವಿವರ: ಅರ್ಜಿಯ ಜೊತೆಗೆ ಎರಡು ಭಾವಚಿತ್ರಗಳು,ಬ್ಯಾಂಕ್ ಖಾತೆಯ ಪುಸ್ತಕದ ನಕಲು ಪ್ರತಿ, ಅರ್ಜಿದಾರಳ ವಯಸ್ಸು ದೃಢೀಕರಿಸುವ ದಾಖಲೆ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ನಕಲು ಪ್ರತಿ, ಬೀದಿಬದಿ ವ್ಯಾಪಾರಿ ಎಂದು ಪೌರಾಡಳಿತ ಇಲಾಖೆಯಿಂದ ಪಡೆದ ಗುರುತಿನ ಚೀಟಿ/ಬೆಂಗಳೂರು ನಗರದಲ್ಲಿ ಬಿಬಿಎಂಪಿಯರಿಂದ ಪಡೆದ ಗುರುತಿನ ಚೀಟಿ/ಪಿಡಿಓ ದೃಢೀಕರಿಸಿ ನೀಡಿರುವ ಪತ್ರ, ಈಗಾಗಲೇ ಬೀದಿಬದಿ ವ್ಯಾಪಾರ ಮಾಡುತ್ತಿರುವ ಸ್ಥಳದ ಭಾವಚಿತ್ರ(ಫಲಾನುಭಿಯನ್ನೊಳಗೊಂಡಂತೆ) ನೀಡಬೇಕು ಎಂದು ಅವರು ತಿಳಿಸಿದ್ದಾರೆ.

*ಅರ್ಜಿ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು


Spread the love

About Laxminews 24x7

Check Also

ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಐವರು ಬಾಣಂತಿಯರು ಸಾವು

Spread the loveಬಳ್ಳಾರಿ, ನವೆಂಬರ್ 28: ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ 15 ದಿನಗಳಲ್ಲಿ ಒಟ್ಟು ಐವರು ಬಾಣಂತಿಯರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ