Breaking News

ಹೆತ್ತ ತಾಯಿಯನ್ನೇ ಕಾಮದಾಟಕ್ಕೆ ಕರೆದ ಮಗ –ಸಹೋದರರ ಕೈಯಲ್ಲೇ ಹೆಣವಾದ

Spread the love

ಬಳ್ಳಾರಿ‌: ಹೆತ್ತತಾಯಿಯನ್ನೇ ಕಾಮದಾಟಕ್ಕೆ ಕರೆದಿದ್ದಕ್ಕೆ ರೊಚ್ಚಿಗೆದ್ದು ಸಹೋದರನನ್ನು ಇಬ್ಬರು ಸಹೋದರರು ಕೊಡಲಿಯಿಂದ ಹತ್ಯೆಗೈದ ಘಟನೆ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಹೋಬಳಿಯಲ್ಲಿ ನಡೆದಿದೆ.ಬಸವರಾಜ (26) ಕೊಲೆಯಾದ ವ್ಯಕ್ತಿ. ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೊಲೆಗೆ ಕಾರಣರಾದ ಆ ಇಬ್ಬರ ಬಂಧನಕ್ಕೆ ಕಾನಾಹೊಸಳ್ಳಿ ಪೊಲೀಸರು ಈಗ ಮುಂದಾಗಿದ್ದಾರೆ.

ಏನಿದು ಪ್ರಕರಣ?
ಬಸವರಾಜ ತಾಯಿಯ ಜೊತೆ ಲೈಂಗಿಕ ಸಂಪರ್ಕಕ್ಕೆ ಮಾಡುವಂತೆ ಒತ್ತಾಯಿಸುತ್ತಿದ್ದ. ಈತನ ಕಾಟವನ್ನು ಸಹಿಸಲಾಗದೇ ತಾಯಿ ಈ ವಿಚಾರವನ್ನು ಮಕ್ಕಳ ಬಳಿ ತಿಳಿಸಿದ್ದಾಳೆ.

ಈ ರೀತಿ ಒತ್ತಾಯ ಮಾಡುವುದು ತಪ್ಪು ಎಂದು ಕುಟುಂಬ ಸದಸ್ಯರೆಲ್ಲರೂ ಸೇರಿಕೊಂಡು ಬುದ್ದಿವಾದ ಹೇಳಿದ್ದರೂ ಕೂಡ ಕಳೆದ‌ ಭಾನುವಾರ ಮನೆಯವರೆಲ್ಲರೂ ಕೆಲಸಕ್ಕೆ ಹೋದ ಸಂದರ್ಭದಲ್ಲಿ ತಾಯಿಯನ್ನು ಮತ್ತೆ ಕಾಮದಾಟಕ್ಕೆ ಒತ್ತಾಯಿಸಿದ್ದಾನೆ.

ಈತನ ನಡವಳಿಕೆ ಸಹಿಸದ ತಾಯಿ ಕೆಲಸಕ್ಕೆ ಹೋಗಿದ್ದ ತನ್ನಿಬ್ಬರ ಮಕ್ಕಳಾದ ಕೊಟ್ರೇಶ ಮತ್ತು ವಿರೂಪಾಕ್ಷಿಗೆ ಆಳುತ್ತಾ ಈ ವಿಚಾರವನ್ನು ತಿಳಿಸಿದ್ದಾಳೆ. ಮತ್ತೆ ಹಳೇ ಚಾಳಿ ಮುಂದುವರಿಸಿದ ವಿಚಾರ ತಿಳಿದು ರೊಚ್ಚಿಗೆದ್ದ ಸಹೋದರರು ತಡರಾತ್ರಿ ಬಸವರಾಜನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬಳಿಕ ಆತನನ್ನು ಕೂಡ್ಲಿಗಿಯ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.


Spread the love

About Laxminews 24x7

Check Also

ಬಳ್ಳಾರಿ ಬಾಣಂತಿಯರ ಸಾವಿಗೆ ಔಷಧ ಮಾತ್ರ ಕಾರಣವಲ್ಲ: ರಾಜ್ಯ ಮಹಿಳಾ ಆಯೋಗ

Spread the loveಬಳ್ಳಾರಿ, ಡಿಸೆಂಬರ್​ 14: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ (BIMS) ಬಾಣಂತಿಯರ ಸಾವಿಗೆ ಕೇವಲ IV ರಿಂಗರ್ ಲ್ಯಾಕ್ಟೇಟ್ ದ್ರಾವಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ