ಚಿಕ್ಕಮಗಳೂರು: ಓವರ್ ಲೋಡ್ ಆಗಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಪಲ್ಟಿ ಹೊಡೆದಿರೋ ಘಟನೆ, ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿ ಘಟನೆ ನಡೆದಿದೆ.
ಮಾಕೋನಹಳ್ಳಿಯಲ್ಲಿ, ಟಿಂಬರ್ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್, ರಸ್ತೆಯ ಅಪ್ ಹತ್ತುವ ವೇಳೆ ಟೈರ್ ಪಂಚರ್ ಆಗಿ, ಹಿಂಬದಿಗೆ ಹೋಗಿ ಹೋಗಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಟ್ರ್ಯಾಕ್ಟರ್ನಿಂದ ಜಿಗಿದು ಚಾಲಕ ಜೀವ ಉಳಿಸಿಕೊಂಡಿದ್ದಾನೆ. ಆದ್ರೆ, ಟ್ರ್ಯಾಕ್ಟರ್ಸಂಪೂರ್ಣ ಜಖಂಗೊಂಡಿದೆ. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.
Laxmi News 24×7