Breaking News

ತಮಿಳುನಾಡಿನಲ್ಲಿ ಸೋಮವಾರದಿಂದ ಥಿಯೇಟರ್‌ ಓಪನ್‌

Spread the love

ನವದೆಹಲಿ: ತಮಿಳುನಾಡು ಸರ್ಕಾರವು ಕೋವಿಡ್‌ ನಿರ್ಬಂಧಗಳಲ್ಲಿ ಕೆಲವನ್ನು ಸಡಿಲಿಕೆ ಮಾಡಿದ್ದು, ಇನ್ನು ಕೆಲವನ್ನು ಸೆ.9ರವರೆಗೆ ವಿಸ್ತರಣೆ ಮಾಡಿದೆ.

ಅದರಂತೆ, ಸೋಮವಾರದಿಂದಲೇ ಶೇ.50ರ ಆಸನ ಸಾಮರ್ಥ್ಯದಲ್ಲಿ ಥಿಯೇಟರ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಚಿತ್ರ ಮಂದಿರಗಳ ಎಲ್ಲ ಸಿಬ್ಬಂದಿಯೂ ಲಸಿಕೆ ಪಡೆದಿರಬೇಕು ಎಂಬ ಷರತ್ತು ಹಾಕಲಾಗಿದೆ. ಸೆ.1ರಿಂದ ಶಾಲೆಗಳೂ(9-12ನೇ ತರಗತಿ) ಆರಂಭ ವಾಗಲಿವೆ. ಹೋಟೆಲ್‌, ಕ್ಲಬ್‌ಗಳಿಗೂ ಅನುಮತಿ ನೀಡಲಾಗಿದೆ.ಬೀಚ್‌ಗಳಿಗೂ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶವಿದೆ.

ಅಕ್ಟೋಬರ್‌ನಲ್ಲಿ ಲಸಿಕೆ:
ಅಕ್ಟೋಬರ್‌ ತಿಂಗಳ ವೇಳೆಗೆ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಝೈಡಸ್‌ ಕ್ಯಾಡಿಲಾದ ಝೈಕೋವ್‌ ಡಿ ಲಸಿಕೆ ಲಭ್ಯವಾಗಲಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಶರ್ವಿಲ್‌ ಪಟೇಲ್‌ ಶನಿವಾರ ತಿಳಿಸಿದ್ದಾರೆ.

ಅಲ್ಲದೆ ಆ ಸಮಯದಲ್ಲಿ ತಿಂಗಳಿಗೆ 1 ಕೋಟಿ ಡೋಸ್‌ ಲಸಿಕೆ ಉತ್ಪಾದಿಸಲಿದ್ದೇವೆ. ಮುಂದಿನ ವಾರವೇ ಲಸಿಕೆಯ ದರ ನಿಗದಿಯಾಗಲಿದೆ ಎಂದಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ