Breaking News

ಭಾರತದ ಮೊದಲ ಸೆಲೆಬ್ರಿಟಿ: ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್‌ ವಾಯ್ಸ್‌ನಲ್ಲಿ ಅಲೆಕ್ಸಾ!

Spread the love

ಅಮಿತಾಭ್‌ರ ಧ್ವನಿ ಕೇಳಬೇಕೆಂದರೆ ಬಳಕೆದಾರರು, “ಅಲೆಕ್ಸಾ, ಸೇ ಹಲೋ ಟು ಮಿಸ್ಟರ್‌ ಅಮಿತಾಭ್‌ ಬಚ್ಚನ್‌’ ಎಂದು ಹೇಳಿದರೆ ಸಾಕು, ಆಗ ಹೆಣ್ಣು ಧ್ವನಿಯ ಬದಲಾಗಿ ಅಮಿತಾಭ್‌ ಮಾತು ಕೇಳಿಸುತ್ತದೆ.

ಅಮೆಜಾನ್ ಅಲೆಕ್ಸಾ (Amazon Alexa) ಸ್ಮಾರ್ಟ್ ಡಿಜಿಟಲ್ ವಾಯ್ಸ್ ಅಸಿಸ್ಟೆಂಟ್‌ನಲ್ಲಿ ಇನ್ನುಮುಂದೆ ನೀವು ಬಾಲಿವುಡ್ ಮೇರುನಟ ಅಮಿತಾಬ್ ಬಚ್ಚನ್ ಧ್ವನಿಯನ್ನು ಕೇಳಬಹುದು. ದೇಶದಲ್ಲಿ ಅಮೆಜಾನ್ ಸೆಲೆಬ್ರಿಟಿ ವಾಯ್ಸ್ ಎಕ್ಸ್‌ಪೀರಿಯನ್ಸ್ ಅಡಿಯಲ್ಲಿ ಅಮಿತಾಭ್ ಬಚ್ಚನ್ (Amitabh Bachchan) ಧ್ವನಿಯನ್ನು ಅಮೆಜಾನ್ ಅಲೆಕ್ಸಾ ಜನರಿಗೆ ಪರಿಚಯಿಸುತ್ತಿದೆ. ಈ ರೀತಿ ಅಲೆಕ್ಸಾದ ಧ್ವನಿಯಾಗಲಿರುವ ಭಾರತದ ಮೊದಲ ಸೆಲೆಬ್ರಿಟಿಯಾಗಲಿದ್ದಾರೆ 78 ವರ್ಷದ ಈ ಹಿರಿಯ ನಟ.

ಅಮಿತಾಭ್‌ ಬಚ್ಚನ್‌ ಕೇವಲ ತಮ್ಮ ನಟನೆಯಿಂದಷ್ಟೇ ಅಲ್ಲದೇ, ತಮ್ಮ ಅದ್ಭುತ ಧ್ವನಿಯಿಂದಲೂ ಗುರುತಿಸಿ ಕೊಂಡವರು. ಅಮಿತಾಭ್‌ರ ಧ್ವನಿ ಕೇಳಬೇಕೆಂದರೆ ಬಳಕೆದಾರರು, “ಅಲೆಕ್ಸಾ, ಸೇ ಹಲೋ ಟು ಮಿಸ್ಟರ್‌ ಅಮಿತಾಭ್‌ ಬಚ್ಚನ್‌’ ಎಂದು ಹೇಳಿದರೆ ಸಾಕು, ಆಗ ಹೆಣ್ಣು ಧ್ವನಿಯ ಬದಲಾಗಿ ಅಮಿತಾಭ್‌ ಮಾತು ಕೇಳಿಸುತ್ತದೆ.

ಬಳಕೆದಾರರು ಈ ಅದ್ಭುತ ಧ್ವನಿಯನ್ನು ಎಕೋ ಸಾಧನಗಳಲ್ಲಿ ಒಂದು ವರ್ಷಕ್ಕೆ 149 ರೂ. ಬೆಲೆಗೆ ಪಡೆದುಕೊಳ್ಳಬಹುದು ಎಂದು ಅಮೆಜಾನ್ ಹೇಳಿದೆ. ಅಲೆಕ್ಸಾದಲ್ಲಿ ಅಮಿತಾಭ್ ಅವರ ಜೀವನದ ಕಥೆ, ಹಾಡುಗಳು, ಟಂಗ್ ಟ್ವಿಸ್ಟರ್ಸ್ ಅಲ್ಲದೆ ಅವರ ಮೋಟಿವೇಶನ್ ಮಾತುಗಳನ್ನು ಕೇಳಬಹುದಾಗಿದೆ. ಉಳಿದಂತೆ ಮ್ಯೂಸಿಕ್, ಅಲರಾಮ್, ಹವಾಮಾನ ವರದಿ ಮಾಮೂಲಾಗಿ ಇರಲಿದೆ.

‘ಟೆಕ್ನಾಲಜಿಯಿಂದ ನಾನು ಅನೇಕ ವಿಚಾರಗಳಲ್ಲಿ ಅಪ್ಡೇಟ್ ಆಗಿದ್ದೀನಿ. ಇಷ್ಟು ದಿನಗಳ ಕಾಲ ಸಿನಿಮಾ, ಟಿವಿ ಶೋ, ಪಾಡ್‌ಕಾಸ್ಟ್ ಆಯ್ತು ಈಗ ಇದರಲ್ಲೂ ಬರುವುದಕ್ಕೆ ಖುಷಿಯಾಗುತ್ತಿದೆ. ಧ್ವನಿಯಿಂದ ನಮ್ಮ ಅಭಿಮಾನಿಗಳನ್ನು ಎಂಗೇಜ್‌ ಆಗಿಟ್ಟಿಕೊಳ್ಳಲು ಇದು ಒಳ್ಳೆಯ ಉಪಾಯ’ ಎಂದಿದ್ದಾರೆ ಅಮಿತಾಬ್ .

ಅಮೆಜಾನ್​ ಇಂಡಿಯಾದಲ್ಲಿ ಕಾರ್ಯನಿರ್ವಹಿಸುವ ಪುನೀರ್ಶ್​ ಕುಮಾರ್​​ ‘ ಬಾಲಿವುಡ್​ನಲ್ಲಿ ಅಮಿತಾಭ್​ ಅವರ ಧ್ವನಿ ಭಾರೀ ಜನಪ್ರಿಯತೆ ಪಡೆದಿದೆ. ಅಲೆಕ್ಸಾ ಅವರ ಧ್ವನಿಯನ್ನು ಬಳಸುವುದರಿಂದ ಗ್ರಾಹಕರಿಗೆ ಆನಂದ ಸಿಗಬಗಲಿದೆ’ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಮೇರಿಕದ ನಟ ಸ್ಯಾಮ್ಯುಯೆಲ್ ಜಾಕ್ಸನ್ ಅಲೆಕ್ಸಾಗೆ ಧ್ವನಿ ನೀಡಲು ಒಟ್ಟಾಗಿದ್ದರು ಆದರೆ ಅದು ಯುಎಸ್​ಗೆ ಮಾತ್ರ ಸೀಮಿತವಾಗಿತ್ತು. ಸದ್ಯ ಭಾರತದಲ್ಲಿ ಬಚ್ಚನ್ ಧ್ವನಿ ಕೇಳಲು ಅಭಿಮಾನಿಗಳು ಕಾತುದಿಂದ ಕಾಯುತ್ತಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ