ಬೆಂಗಳೂರು: ನನ್ನ ಹೆಸರನ್ನು ಬಳಸಿಕೊಂಡು ಯಾರು ಕೂಡ ಅಭಿಮಾನಿಗಳ ಬಳ, ಸಂಘ ಸಂಸ್ಥೆಗಳನ್ನು, ಮತ್ತಿತರ ಸಂಘಟನೆಗಳನ್ನು ಮಾಡಿಕೊಳ್ಳದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಂದು ಸ್ಪಷ್ಟ ಪಡಿಸಿದ್ದಾರೆ.
ಈಗಾಗಲೇ ಅಸ್ತಿತ್ವದಲ್ಲಿರುವ ಎಂ.ಎಸ್. ಅಂಗಡಿ ನೇತೃತ್ವದ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘಟನೆ ಹೊರತು ಪಡಿಸಿ, ಈ ಕ್ಷಣದಿಂದಲೇ ಉಳಿದ ಸಂಘಟನೆಗಳನ್ನು ವಿಸರ್ಜಿಸುವಂತೆ ಸೂಚನೆ ನೀಡಿದ್ದಾರೆ.
ಯಾರಾದರು ತಮ್ಮ ಹಾಗೂ ಸಹೋದರ ಡಿ.ಕೆ. ಸುರೇಶ ಅವರ ಹೆಸರಲ್ಲಿ ಸಂಘಟನೆಗಳನ್ನು ನಡೆಸಿದರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
Laxmi News 24×7