ಬೆಂಗಳೂರು: ಇಲ್ಲಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದ ಐವರು ವಿದೇಶಿ ಮಹಿಳಾ ಕೈದಿಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಿರುವ ಕೈದಿಗಳು ಆಫ್ರಿಕಾದ ಕಾಂಗೊ, ನೈಜೀರಿಯ ದೇಶದ ಮೂಲದವರೆಂದು ತಿಳಿದುಬಂದಿದೆ. ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ 15 ಕೈದಿಗಳನ್ನು ಬಂಧಿಸಿದ್ದರು. ಅವರಲ್ಲಿ ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಸಂಬಂಧ 5 ಮಂದಿ ವಿದೇಶಿ ಮಹಿಳೆಯರನ್ನೂ ಬಂಧಿಸಲಾಗಿತ್ತು.
ಈ ಐವರನ್ನು ಅವರ ದೇಶನ್ನೆ ವಾಪಸ್ ಕಳುಹಿಸುವ ಬಗ್ಗೆ ಪೊಲೀಸರು ಅವರ ದೇಶದ ರಾಜ ತಾಂತ್ರಿಕ ಕಚೇರಿಯವರೊಂದಿಗೆ ಚರ್ಚಿಸಿದ್ದರು. ಈ ನಡುವೆ ಮಹಿಳೆಯರು ಪರಾರಿಯಾಗಿದ್ದಾರೆ.
ಸಾಂತ್ವನ ಕೇಂದ್ರದಲ್ಲಿದ್ದ ಮಹಿಳೆಯರು ಕುಡಿಯಲು ನೀರು ಬೇಕೆಂದು ಕೇಳಿದ್ದಾರೆ. ಸಿಬ್ಬಂದಿ ನೀರು ತರಲು ಹೋದ ಸಮಯದಲ್ಲೇ 6 ಮಂದಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ಗೋಡೆ ಹಾರುವ ಸಂದರ್ಭದಲ್ಲಿ ಒಬ್ಬ ಮಹಿಳೆ ಕೆಳಕ್ಕೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಉಳಿದ ಐವರು ಮಹಿಳೆಯರು ಪರಾರಿಯಾದ್ದಾರೆ. ಗಾಯಾಳು ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿದ್ದಾಪುರ ಪೊಲೀಸರು ತಿಳಿಸಿದ್ದಾರೆ.
Laxmi News 24×7