ನವದೆಹಲಿ : ಅಧಿಕಾರಕ್ಕೆ ಬಂದಾಗಿನಿAದ ಪ್ರಧಾನಮಂತ್ರಿ ಮೋದಿ ಬರೀ ಭಾಷಣ ಮಾಡುತ್ತಿದ್ದಾರೆ ಹೊರತು ಯಾವುದನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಇಂದು ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣ ಕುರಿತು ಪ್ರತಿಕ್ರಿಯೆ ನೀಡಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನುಡುಯುವುದೊಂದು ನಡೆಯುವುದೊಂದು ಎಂದು ಅಸಮಾಧಾನ ಹೊರ ಹಾಕಿದರು.
ರೈತರ ಭವಿಷ್ಯಕ್ಕೆ ಹಾನಿಯಾಗುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯ ಮಾಡಿ ದೇಶದ ರೈತರು ಒಂದು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ, ರೈತ ನಾಯಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಬರಿ ಘೋಷಣೆಯಿಂದ ಜನರನ್ನು ಮರಳು ಮಾಡುವುದೇ ಸರ್ಕಾರದ ಪ್ರಮುಖ ನೀತಿ, ಗುರಿಯಾಗಿದೆ ಎಂದು ಟೀಕಿಸಿದರು.
Laxmi News 24×7