Breaking News

2ಎ ಮೀಸಲಾತಿ ನೀಡದಿದ್ದರೆ ಅ. 1ರಿಂದ ವಿವಿಧ ಹಂತದ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Spread the love

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೆ.15 ರೊಳಗೆ 2ಎ ಮೀಸಲಾತಿ ನೀಡದಿದ್ದರೆ, ಅ 1ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸೇರಿದಂತೆ ವಿವಿಧ ಹಂತದ ಹೋರಾಟ ಕೈಗೊಳ್ಳಲು, ಪಂಚಮಸಾಲಿ ಮೀಸಲಾತಿ ಚಳವಳಿಗಾರರ ದುಂಡು ಮೇಜಿನ ಸಭೆ ನಿರ್ಣಯಿಸಿದೆ.

ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, 2ಎ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮದಿಂದ ಬೇಂಗಳೂರುವರೆಗೆ ನಡೆಸಿದ ಪಾದಯಾತ್ರೆ ಹಾಗೂ ಹೋರಾಟದ ವೇಳೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಆರು ತಿಂಗಳಲ್ಲಿ ಪರಿಹಾರದ ಭರವಸೆ ನಿಡಿದ್ದರು, ಸರಕಾರ ನೀಡಿದ ಸಮಯ ಸೆಪ್ಟೆಂಬರ್16 ಕ್ಕೆ ಮುಗಿಯಲಿದೆ. ಆ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ಸಮಾಜದ ದುಂಡುಮೇಜಿನ ಸಭೆ ನಡೆಸಿ ಪ್ರಮುಖ ಐದು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಸರಕಾರಕ್ಕೆ ಬೇಡಿಕೆ ನೆನಪಿಸಲು ಆ.26 ರಿಂದ ಸೆ.30ರವರೆಗೆ ಚಾಮರಾಜನಗರ ಜಿಲ್ಲೆ ಮಲೈ ಮಹದೇಶ್ವರ ಬೆಟ್ಟದಿಂದ ಪಂಚಮಸಾಲಿ ಪ್ರತಿಜ್ಞೆ ಪಂಚಾಯತ್ ಅಛಿಯಾನ ಕೈಗೊಳಲಾಗುವುದು. ಸರಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಅ.1ರಂದು ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಜನ್ಮ ದಿನದಂದು ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಲಾಗುವುದು ಎಂದರು.

ಸಮಾಜದ ಮುಖಂಡರಾದ ಬಸನಗೌಡ ಪಾಟೀಲ, ವಿಜಯಾನಂದ ಕಾಶಪ್ಪನವರ, ಶಿವಶಂಕರ, ನಂದಿಹಳ್ಳಿ ಹಾಲಪ್ಪ, ಸೋಮಣ್ಣ ಬೇವಿನಮರದ ಇನ್ನಿತರರು ಇದ್ದರು.


Spread the love

About Laxminews 24x7

Check Also

ಹುಕ್ಕೇರಿ : ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸಿ – ಲೋಕಾಯುಕ್ತ ವೆಂಕಟೇಶ ಯಡಹಳ್ಳಿ.

Spread the loveಹುಕ್ಕೇರಿ : ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸಿ – ಲೋಕಾಯುಕ್ತ ವೆಂಕಟೇಶ ಯಡಹಳ್ಳಿ. ಸರ್ಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ