7 ಮಕ್ಕಳ ತಂದೆ, 67 ವರ್ಷದ ವ್ಯಕ್ತಿ ಪ್ರೀತಿಗೆ ಬಿದ್ದ 19ರ ಹುಡುಗಿ.!

Spread the love

ಪ್ರೀತಿ ಕುರುಡು ಎನ್ನುತ್ತಾರೆ. ಅದಕ್ಕೆ ವಯಸ್ಸಿನ ಮಿತಿಯಿಲ್ಲ, ಜಾತಿಯ ಗಡಿಯಿಲ್ಲ. ಇದಕ್ಕೆ ಹರಿಯಾಣದ ಪಲ್ವಾಲ್‌ನಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. 19 ವರ್ಷದ ಹುಡುಗಿ 7 ಮಕ್ಕಳ ತಂದೆಯಾಗಿರುವ 67 ವರ್ಷದ ವ್ಯಕ್ತಿಯ ಪ್ರೀತಿಗೆ ಬಿದ್ದಿದ್ದಾಳೆ. ಇಷ್ಟೇ ಅಲ್ಲ ಇಬ್ಬರೂ ಮದುವೆಯಾಗಿದ್ದಾರೆ. ನಂತ್ರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗೆ ಹೋಗಿ, ತಮಗೆ ರಕ್ಷಣೆ ಬೇಕೆಂದು ಮನವಿ ಸಲ್ಲಿಸಿದ್ದಾರೆ.

ವರದಿ ಪ್ರಕಾರ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಬಗ್ಗೆ ಅನುಮಾನಿಸಿ ತನಿಖೆಗೆ ಆದೇಶ ನೀಡಿತ್ತು. ಇದರ ನಂತರ ಪೊಲೀಸರು ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಮದುವೆಗೆ ಹುಡುಗಿಯ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಪಲ್ವಾಲ್ ಎಸ್ಪಿ ದೀಪಕ್ ಗೆಹ್ಲಾವತ್ ಹೈಕೋರ್ಟ್ ನಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. ತಾಯಿಯ ಒಪ್ಪಿಗೆಯ ಮೇರೆಗೆ ಈ ಮದುವೆಯನ್ನು ಮಾಡಿಕೊಂಡಿದ್ದಾಳೆಂದು ವರದಿಯಲ್ಲಿ ಹೇಳಲಾಗಿದೆ.

ವರದಿಯ ಪ್ರಕಾರ, 67 ವರ್ಷದ ವ್ಯಕ್ತಿಗೆ 7 ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದೆ. ಪತ್ನಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದಳು. ಹುಡುಗಿ ಕೂಡ ಈಗಾಗಲೇ ಮದುವೆಯಾಗಿದ್ದಾಳೆ. ಆದ್ರೆ ಆಕೆಗೆ ಮಕ್ಕಳಿಲ್ಲ. ವಿಚ್ಛೇದನ ಪಡೆಯದೆ ಆಕೆ ಮದುವೆಯಾಗಿದ್ದಾಳಂತೆ. ಆಕೆ ಪತಿ ಇದನ್ನು ವಿರೋಧಿಸುವುದಿಲ್ಲ ಎಂದಿದ್ದಾನೆ.


Spread the love

About Laxminews 24x7

Check Also

ವಾಟಾಳ್ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ಕ್ರಮ: ಶಿವರಾಜ್ ತಂಗಡಗಿ

Spread the loveಬೆಂಗಳೂರು: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಕೆಲಸ ಸರ್ಕಾರ ಮಾಡಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ