ಕಾರವಾರ: ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸಮುದ್ರದಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆಯಾಗಿದ್ದಾನೆ.
ಬೆಂಗಳೂರು ನಗರದ ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನೀರಿನಲ್ಲಿ ಮುಳಗಿ ನಾಪತ್ತೆಯಾದ ಯುವಕ. ಒಟ್ಟು ಎಂಟು ಜನ ಸ್ನೇಹಿತರೊಂದಿಗೆ ಈತ ಪ್ರವಾಸಕ್ಕಾಗಿ ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದ. ಸ್ಥಳೀಯ ಜನರ ಎಚ್ಚರಿಕೆ ನಡುವೆಯೂ ಎಂಟು ಜನ ಈಜಲು ಸಮುದ್ರಕ್ಕೆ ಇಳಿದಿದ್ದರು.ಅಲೆಯ ಅಬ್ಬರಕ್ಕೆ ಇಬ್ಬರು ಕೊಚ್ಚಿಹೋಗಿದ್ದರು. ಈ ವೇಳೆ ಓರ್ವನನ್ನು ಲೈಫ್ ಗಾರ್ಡ ಹಾಗೂ ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿದೆ. ಸಮುದ್ರಕ್ಕೆ ಇಳಿದಿದ್ದ ಉಳಿದವರು ಈಜಿ ದಡ ಸೇರಿದ್ದಾರೆ. ಆದರೆ ಅಲೆಗಳ ಅಬ್ಬರಕ್ಕೆ ಅರುಣ್ ತೇಲಿ ಹೋಗಿದ್ದಾನೆ.
Laxmi News 24×7