Breaking News

ಕೆಲಸ ಮಾಡುತ್ತಿದ್ದ ಅಂಗಡಿಯಿಂದಲೇ ಚಿನ್ನ ಕದ್ದು ಅಡವಿಟ್ಟ ಖದೀಮ ಈಗ ಪೊಲೀಸರ ಅತಿಥಿ

Spread the love

ಹುಣಸೂರು: ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದ ಯುವಕನೊರ್ವ ಕೆಲಸ ಮಾಡತ್ತಿದ್ದ ಚಿನ್ನಾಭರಣದ ಅಂಗಡಿಯಲ್ಲೇ ಚಿನ್ನಾಭರಣ ಕದ್ದು,ಅಡವಿಟ್ಟಿದ್ದ ಘಟನೆಯನ್ನು ಹುಣಸೂರು ನಗರ ಠಾಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಣಸೂರು ನಗರದ ಜೆಎಲ್‌ ಬಿ ರಸ್ತೆಯ ಪೃಥ್ವಿ ಜ್ಯುವಲರ್‍ಸ್ ಅಂಗಡಿಯಲ್ಲಿ ನಡೆದಿದ್ದು, ತಾಲೂಕಿನ ರತ್ನಪುರಿಯ ಶಿವರಾಮ್ ಎಂಬಾತನೇ ಅನ್ನ ಹಾಕಿದ ಮನೆಗೆ ಕನ್ನ ಹಾಕಿ ಬಂಧನಕ್ಕೊಳಗಾದಾತ. ಈತನಿಂದ ಸುಮಾರು 25 ಲಕ್ಷರೂ ಬೆಲೆ ಬಾಳುವ 503 ಗ್ರಾಂ.ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಹುಣಸೂರು ತಾಲೂಕಿನ ರತ್ನಪುರಿ ನಿವಾಸಿ ಶಿವರಾಮ್ ಕಳೆದ 9 ವರ್ಷಗಳಿಂದ ನಗರದ ಜೆಎಲ್‌ಬಿ ರಸ್ತೆಯ ಪೃಥ್ವಿ ಜ್ಯುವೆಲರ್‍ಸ್‌ನಲ್ಲಿ ಕೆಲಸ ಮಾಡುತ್ತಿದ್ದ, ಅಂಗಡಿಗೆ ಕಾರುಗಳಲ್ಲಿ ಬರುತ್ತಿದ್ದ ಗಿರಾಕಿಗಳು, ತನ್ನ ಸ್ನೇಹಿತರು ಕಾರುಗಳಲ್ಲಿ ಓಡಾಡುತ್ತಿದ್ದುದ್ದನ್ನು ಕಂಡ ಶಿವರಾಮ್ ತಾನು ಸಹ ಕಾರು ತೆಗೆದುಕೊಳ್ಳಲು ತೀರ್ಮಾನಿಸಿ, ಕೆಲಸ ಮಾಡುತ್ತಿದ್ದ ಚಿನ್ನಾಭರಣದ ಅಂಗಡಿಯಲ್ಲಿ 2019 ರಿಂದ ಆಗಾಗ್ಗೆ ಒಂದೊಂದೇ ಚಿನ್ನಾಭರಣಗಳನ್ನು ಕದಿಯಲಾರಂಭಿಸಿದ. ಕದ್ದ ಚಿನ್ನವನ್ನು ನಗರದ ಗಿರವಿ ಅಂಗಡಿಗಳಲ್ಲೇ ಗಿರವಿ ಇಡುತ್ತಿದ್ದ, ಇತ್ತೀಚೆಗೆ ಶಿವರಾಮ್‌ನನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿತ್ತು, ಈ ವೇಳೆ ಚಿನ್ನಾಭರಣ ಕಡಿಮೆಯಾಗಿರುವುದು ಪತ್ತೆಯಾಗಿತ್ತು. ನಗರ ಠಾಣೆಯಲ್ಲಿ ವ್ಯವಸ್ಥಾಪಕ ಸಂತೋಷ್‌ ರಾಜೇ ಅರಸ್ ಅ.2 ರಂದು ದೂರು ನೀಡಿದ್ದರು.

ಎಸ್.ಪಿ. ಆರ್.ಚೇತನ್, ಅಡಿಷನಲ್ ಎಸ್.ಪಿ. ಶಿವಕುಮಾರ್, ಡಿವೈಎಸ್‌ ಪಿ ರವಿಪ್ರಸಾದ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಸಿ.ವಿ.ರವಿ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಚಿನ್ನಾಭರಣ ಕದ್ದಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸ್.ಐ.ಗಳಾದ ಲತೇಶ್‌ ಕುಮಾರ್, ಪಂಚಾಕ್ಷರಿ ಸ್ವಾಮಿ ಸಿಬ್ಬಂದಿಗಳಾದ ಪ್ರಭಾಕರ್, ಶ್ರೀನಿವಾಸ ಪ್ರಸಾದ್, ಶೇಖರ್, ಕುಮಾರ್, ಜಗದೀಶ, ಇರ್ಫಾನ್ ಭಾಗವಹಿಸಿದ್ದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ