Breaking News

ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ; 6 ಕೋಟಿ ಮೌಲ್ಯದ ಎಂಐ ಫೋನ್ ಕಳ್ಳತನ

Spread the love

ಕೋಲಾರ: ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗ್ರಾಮ ದೇವರಾಯಸಮುದ್ರ ಬಳಿಯ ರಾಷ್ಟ್ರೀಯ ಹೆದ್ದಾರೆ 75 ರಲ್ಲಿ ನಡೆದಿದೆ. ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ದರೋಡೆ ಆಗಿದೆ ಎಂದು ತಿಳಿದುಬಂದಿದೆ. ಎಂಐ ಕಂಪನಿಗೆ ಸೇರಿದ ಮೊಬೈಲ್ ಫೋನ್‌ಗಳ ದರೋಡೆ ಮಾಡಲಾಗಿದ್ದು, ಮೊಬೈಲ್​ನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಕೃತ್ಯ ನಡೆದಿದೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡಿನ ಕಾಂಚಿಪುರಂನಿಂದ ಬೆಂಗಳೂರಿಗೆ ಮೊಬೈಲ್ ಲೋಡ್ ಬರುತ್ತಿತ್ತು. ಆಗ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇ ಘಟನೆ ನಡೆದಿದೆ. ಸುಮಾರು ಆರು ಕೋಟಿ ಮೌಲ್ಯದ ಮೊಬೈಲ್​ಗಳು ದರೋಡೆ ಆಗಿವೆ ಎಂದು ತಿಳಿದುಬಂದಿದೆ.

ಚಿಕ್ಕಮಗಳೂರು: ದರೋಡೆಕೋರರನ್ನು ಬಂಧಿಸಿದ ಪೊಲೀಸರಿಗೆ ಮೆಚ್ಚುಗೆ; 1 ಲಕ್ಷ ರೂ. ಬಹುಮಾನ
ಹೈಟೆಕ್ ದರೋಡೆಕೋರರನ್ನು ಬಂಧಿಸಿದ ಪೊಲೀಸರಿಗೆ ಜುಲೈ 20ರಂದು ಡಿಜಿ ಐಜಿಪಿ ಪ್ರವೀಣ್ ಸೂದ್ ಬಹುಮಾನ ಘೋಷಿಸಿದ್ದರು. ಹೈಟೆಕ್ ದರೋಡೆಕೋರರನ್ನು ಬಂಧಿಸಿದ ಪೊಲೀಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇವರಿಗೆ 1 ಲಕ್ಷ ಬಹುಮಾನ ನೀಡಿ ಗೌರವಿಸಿದ್ದರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪೊಲೀಸರ ಕಾರ್ಯಾಚರಣೆ ವೇಳೆ ಹೆದ್ದಾರಿಯಲ್ಲಿ ದರೋಡೆ ಮಾಡಲು ಯತ್ನಿಸುತ್ತಿದ್ದ ನಾಲ್ವರು ಹೈಟೆಕ್ ಕಳ್ಳರು ಸೆರೆ ಸಿಕ್ಕಿದ್ದರು. ಬಂಧಿತರಿಂದ 10 ಸಾವಿರ ನಗದು ಸೇರಿದಂತೆ 2 ರಿವಾಲ್ವರ್, 30 ಬುಲೆಟ್ಸ್, ಚಾಕು, ಬೈಕ್ ವಶಕ್ಕೆ ಪಡೆಯಲಾಗಿತ್ತು. ತನಿಖೆ ವೇಳೆ ಉತ್ತರ ಪ್ರದೇಶದಿಂದ ರಿವಾಲ್ವರ್ ಖರೀದಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು.

ಜೂಜಾಟದ ಅಡ್ಡೆಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ನಾಲ್ವರ ಈ ತಂಡ, ಜೂಜಾಡುತ್ತಿದ್ದ ಸ್ಥಳಕ್ಕೆ ಹೋಗಿ ಗಾಳಿಯಲ್ಲಿ ಫೈರ್ ಮಾಡಿ ಹಣ ದೋಚುತ್ತಿದ್ದರು. ಅಲ್ಲದೆ ಗ್ಯಾಂಗ್ ವಾರ್ ನಡೆಸುವುದಕ್ಕೆ ಈ ತಂಡ ಹೊಂಚುಹಾಕಿತ್ತು. ಇನ್ನು ಕೆಲವು ದಿನಗಳ ಹಿಂದೆ ಹಾಸನದ ಸಮೀಪ ಯಾಚನಹಳ್ಳಿ ಚೇತನ್ ಮೇಲೆ ಫೈರ್ ಕೂಡ ಮಾಡಿದ್ದರು. ಸದ್ಯ ಮಂಡ್ಯದ ಶಿವಕುಮಾರ್, ಹೊಳೆನರಸೀಪುರದ ಕುಮಾರಸ್ವಾಮಿ, ಜಾರ್ಖಂಡ್ ಮೂಲದ ಅಜಯ್ ಕುಮಾರ್ ಸಿಂಗ್, ಮೂಡಿಗೆರೆಯ ಶಿವಕುಮಾರ್​ರನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಬಂಧಿಸಲಾಗಿತ್ತು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ